ಮದುವೆಯ ರಾತ್ರಿ ಕನ್ಯತ್ವ ಪರೀಕ್ಷೆಗೆ ವಿರೋಧಿಸಿದ್ದಕ್ಕೆ ಮೂವರ ಮೇಲೆ ಹಲ್ಲೆ

By Shrilakshmi ShriFirst Published Jan 23, 2018, 1:58 PM IST
Highlights

ಮದುವೆಯ ದಿನ ರಾತ್ರಿ ಕನ್ಯತ್ವ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಂಜರ್'ಬಾತ್ ಸಮುದಾಯದ 40 ಮಂದಿ ಅದೇ ಸಮುದಾಯದ ಮೂವರ ಮೇಲೆ ಹಲ್ಲೆ ಮಾಡಿರುವ ಘಟನೆ ಪುಣೆಯ ಭಟ್ ನಗರದಲ್ಲಿ ನಡೆದಿದೆ.

 ನವದೆಹಲಿ (ಜ.23): ಮದುವೆಯ ದಿನ ರಾತ್ರಿ ಕನ್ಯತ್ವ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಂಜರ್'ಬಾತ್ ಸಮುದಾಯದ 40 ಮಂದಿ ಅದೇ ಸಮುದಾಯದ ಮೂವರ ಮೇಲೆ ಹಲ್ಲೆ ಮಾಡಿರುವ ಘಟನೆ ಪುಣೆಯ ಭಟ್ ನಗರದಲ್ಲಿ ನಡೆದಿದೆ.

ಪ್ರಶಾಂತ್ ಇಂದ್ರೇಖರ್, ಸೌರಭ್ ಮಚ್ಚಲೆ ಹಾಗೂ ಪ್ರಶಾಂತ್ ತಂಚಿಕರ್ ಎನ್ನುವವರು ಹಲ್ಲೆಗೊಳಗಾದವರು. ಕಂಜುರ್'ಬಾತ್ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಕನ್ಯತ್ವ ಪರೀಕ್ಷೆಯನ್ನು ವಿರೋಧಿಸಿ ವಾಟ್ಸಾಪಿನಲ್ಲಿ 'Stop the V Ritual' ಎಂಬ ಗ್ರೂಪ್ ಮಾಡಲಾಗಿದೆ. ಈ ಮೂವರು ಈ ಗ್ರೂಪಿನ ಸದಸ್ಯರು ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಏನಿದು ಕನ್ಯತ್ವ ಪರೀಕ್ಷೆ?

ಕಂಜರ್'ಬಾತ್ ಸಮುದಾಯದ ಪದ್ಧತಿ ಪ್ರಕಾರ, ಮದುವೆಯ ರಾತ್ರಿ ನವ ದಂಪತಿಗಳಿಗೆ ಬಿಳಿ ಬಟ್ಟೆಯನ್ನು ನೀಡಲಾಗುತ್ತದೆ. ಮಾರನೇ ದಿನ ಪಂಚಾಯತಿಯ ಪ್ರಮುಖರು ವಧುವನ್ನು ಕೇಳುತ್ತಾರೆ, ವಧು ಹೇಗೆ? ಅಂತ. ಅವಳು ಕನ್ಯೆಯಾಗಿದ್ದರೆ ಗಂಡ ಮೂರು ಬಾರಿ ಕನ್ಯತ್ವ ಳಿಸಿಕೊಂಡಿದ್ದಾಳೆ ಎಂದು ಅವನು ಸರ್ಟಿಫಿಕೇಟ್ ಕೊಟ್ಟರೆ ಮುಗೀತು. ಒಂದು ವೇಳೆ ಅಲ್ಲ ಎಂದರೆ ಆಕೆಯ ಮೇಲೆ ದಂಡ ವಿಧಿಸಲಾಗುತ್ತದೆ. ಇದು ಮಹಿಳೆಯಿಂದ ಮಹಿಳೆಗೆ ಬೇರೆ ಬೇರೆಯಾಗಿರುತ್ತದೆ.

 

click me!