ಸ್ವಾಮೀಜಿ ಬಾಯಲ್ಲಿ 'ಸಂಸ್ಕೃತ": ಬಾಯಿಗೆ ಬಂದಂತೆ ಭಕ್ತರನ್ನು ತೆಗಳಿದ ಶ್ರೀಗಳು

Published : Jun 06, 2017, 08:24 PM ISTUpdated : Apr 11, 2018, 12:46 PM IST
ಸ್ವಾಮೀಜಿ ಬಾಯಲ್ಲಿ 'ಸಂಸ್ಕೃತ": ಬಾಯಿಗೆ ಬಂದಂತೆ ಭಕ್ತರನ್ನು ತೆಗಳಿದ ಶ್ರೀಗಳು

ಸಾರಾಂಶ

ಪೂಜ್ಯನೀಯ ಸ್ಥಾನದಲ್ಲಿರಬಹುದಾದ ಸ್ವಾಮೀಜಿ ಬಾಯಿಗೆ ಬಂದಂತೆ ಜನಸಾಮಾನ್ಯರಿಗಿಂತ ಕಡೆಯದಾಗಿ ಬೈದಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹರಿಹರ ತಾಲ್ಲೂಕಿನ ಬೆಳ್ಳೂಡಿ ಶಾಖಾಮಠದಲ್ಲಿ  ಜೂನ್ 2 ರಂದು ಕುರುಬ ಸಮುದಾಯದ ಮುಖಂಡರ ಸಭೆಯನ್ನು  ಕರೆಯಲಾಗಿತ್ತು. ಸಭೆಯಲ್ಲಿ ಸಮಾಜದ ಮುಖಂಡರಾದ ವೈ.ನಾಗಪ್ಪ ವೈ. ರಾಮಪ್ಪ,ನಾಗೇಂದ್ರಪ್ಪ,ಮಾಜಿ ಕುಲಪತಿ ಮಹೇಶ್ವರಯ್ಯ ಸೇರಿದಂತೆ ಎಲ್ಲಾ ಹರಿಹರ ತಾಲ್ಲೂಕು ಸಮಾಜದ ಮುಖಂಡರು ಸಭೆ ಸೇರಿದ್ದರು.

ದಾವಣಗೆರೆ(ಜೂ.06): ರಾಜ್ಯದ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಬಾಯಲ್ಲಿ ಬಂದಿರುವ  ಅಶ್ಲೀಲ ಸಂಸ್ಕೃತ ಪದಗಳ ಗುಚ್ಛ ವೈರಲ್ ಆಗಿದೆ.

ಪೂಜ್ಯನೀಯ ಸ್ಥಾನದಲ್ಲಿರಬಹುದಾದ ಸ್ವಾಮೀಜಿ ಬಾಯಿಗೆ ಬಂದಂತೆ ಜನಸಾಮಾನ್ಯರಿಗಿಂತ ಕಡೆಯದಾಗಿ ಬೈದಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹರಿಹರ ತಾಲ್ಲೂಕಿನ ಬೆಳ್ಳೂಡಿ ಶಾಖಾಮಠದಲ್ಲಿ  ಜೂನ್ 2 ರಂದು ಕುರುಬ ಸಮುದಾಯದ ಮುಖಂಡರ ಸಭೆಯನ್ನು  ಕರೆಯಲಾಗಿತ್ತು. ಸಭೆಯಲ್ಲಿ ಸಮಾಜದ ಮುಖಂಡರಾದ ವೈ.ನಾಗಪ್ಪ ವೈ. ರಾಮಪ್ಪ,ನಾಗೇಂದ್ರಪ್ಪ,ಮಾಜಿ ಕುಲಪತಿ ಮಹೇಶ್ವರಯ್ಯ ಸೇರಿದಂತೆ ಎಲ್ಲಾ ಹರಿಹರ ತಾಲ್ಲೂಕು ಸಮಾಜದ ಮುಖಂಡರು ಸಭೆ ಸೇರಿದ್ದರು.

ಈ ಸಂದರ್ಭದಲ್ಲಿ ಮುಂದೆ ಹರಿಹರ ತಾಲ್ಲೂಕು ಚುನಾವಣೆಯಲ್ಲಿ ಯಾರಾದರು ಒಬ್ಬರು ಒಮ್ಮತದ ಕುರುಬ ಸಮುದಾಯದ   ಆಭ್ಯರ್ಥಿ ನಿಲ್ಲಬೇಕೆಂದು ಚರ್ಚೆ ನಡೆದಿತ್ತು. ಸಮಾಜದ ಮುಖಂಡರಲ್ಲಿ ಒಮ್ಮತವಿರದ ಕಾರಣ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನಿರಂಜನಾನಂದ ಪುರಿ ಸ್ವಾಮೀಜಿ'ಗೆ ವಹಿಸಲಾಗಿತ್ತು.

ಆಗ ಸಮುದಾಯದ ಎಲ್ಲಾ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಸ್ವಾಮೀಜಿಗಳು, ತಾವು ಅತ್ಯುನ್ನತ ಸ್ಥಾನದಲ್ಲಿರುವುದನ್ನು ಮರೆತು ಭಾಷಣದುದ್ದಕ್ಕುಅಸಹ್ಯ, ಕೆಟ್ಟಕೊಳಕು ಮಾತನಾಡಿದ್ದಾರೆ.  ಆದರೆ ಕುರುಬ ಸಮಾಜದ ಮುಖಂಡರು ತಮ್ಮ ಸ್ವಾಮೀಜಿ ಉದ್ವೇಗದ ಭರದಲ್ಲಿ ಆಡಿರುವ ಮಾತುಗಳು ಕುಟುಂಬದ ಯಜಮಾನನ ಬೈಗುಳ ಇದ್ದಂತೆ ಅವುಗಳ  ಬಗ್ಗೆ ಅನ್ಯತಾ ಭಾವಿಸಬಾರದೆಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಅವರಾಡಿರುವ ಮಾತುಗಳು ಖಾವಿಧಾರಿಗಳು ಇನ್ನು ಮುಂದೆ ಭಕ್ತರ ಮುಂದೆ ಹೇಗೆ ಮಾತನಾಡಬೇಕೆಂಬುದನ್ನು ಹತ್ತಾರು ಬಾರಿ ಯೋಚಿಸುವಂತೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುಪಿ: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ
ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!