ರೈತರ ಮೇಲೆ ಪೊಲೀಸರ ಫೈರಿಂಗ್ : 6 ಸಾವು

By Suvarna Web DeskFirst Published Jun 6, 2017, 7:38 PM IST
Highlights

ಪರಿಸ್ಥಿತಿ ಹಲವು ಕಡೆ ವಿಕೋಪಕ್ಕೆ ಹೋಗಿರುವ ಕಾರಣ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಗಲಭೆ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ ಉದ್ರಿಕ್ತ ಸ್ಥಳಗಳಲ್ಲಿ ಇಂಟರ್'ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಭೂಪಾಲ್(ಜೂ.06): ತಮ್ಮ ಬೇಡಿಕೆಗಳನ್ನು ಈಡೇಸಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಪರಿಣಾಮ ಮೂವರು ಅನ್ನದಾತರು ಮೃತಪಟ್ಟು, ನೂರಾರು ರೈತರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಸಾರ್ ಜಿಲ್ಲೆಯಲ್ಲಿ ನಡೆದಿದೆ.

ಬರಪೀಡಿತ ಪ್ರದೇಶದಲ್ಲಿ ತತ್ತರಿಸುತ್ತಿರುವ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಪ್ರತಿಭಟಿಸುತ್ತಿದ್ದ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ರೈತರು ಮೃತಪಟ್ಟ ನಂತರ ಉದ್ರಿಕ್ತಗೊಂಡ ರೈತರು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಲ್ಲದೆ  ಹಲವು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಪರಿಸ್ಥಿತಿ ಹಲವು ಕಡೆ ವಿಕೋಪಕ್ಕೆ ಹೋಗಿರುವ ಕಾರಣ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು,  ಸಾಮಾಜಿಕ ಮಾಧ್ಯಮಗಳ ಮೂಲಕ ಗಲಭೆ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ ಉದ್ರಿಕ್ತ ಸ್ಥಳಗಳಲ್ಲಿ ಇಂಟರ್'ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮೃತಪಟ್ಟ ರೈತರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಹಾಗೂ ತೀರ್ವವಾಗಿ ಗಾಯಗೊಂಡವರಿಗೆ  1 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಕಾಂಗ್ರೆಸ್ ಪಕ್ಷ'ವನ್ನು ಟೀಕಿಸಿರುವ ಅವರು ಗಲಭೆ ಹೆಚ್ಚಾಗಲು ಕಾಂಗ್ರೆಸ್ ಪಿತೂರಿ ನಡೆಸಿದೆ ಎಂದಿದ್ದಾರೆ.

ರೈತರ ಮೇಲಿನ ಫೈರಿಂಗ್'ಅನ್ನು ಖಂಡಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ' ರಾಜ್ಯ ಬಿಜೆಪಿ ಸರ್ಕಾರ ರೈತರ ಮೇಲೆ ಯುದ್ಧ ಸಾರಿದೆ ಎಂದು ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ನೀಡಿರುವ ಅಂಕಿಅಂಶಗಳ ಪ್ರಕಾರ ಕಳೆದ ವರ್ಷದಲ್ಲಿ ಮಧ್ಯಪ್ರದೇಶದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ರೈತನೊಬ್ಬ ಮೃತಟ್ಟಿದ್ದಾನೆ.  2001 ರಿಂದ 2015ರ ವರೆಗೆ ಮಧ್ಯಪ್ರದೇಶದಲ್ಲಿ 18,687 ಮಂದಿ ಸಾವನ್ನಪ್ಪಿದ್ದಾರೆ.

click me!