ಮೋದಿ ಪಾಕಿಸ್ತಾನಕ್ಕೆ ಹೋದರೆ ಏನಾಗುತ್ತದೆ?

By Web DeskFirst Published Aug 2, 2018, 10:12 PM IST
Highlights

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಬಹುತೇಕ ಖಚಿತವಾಗಿರುವುದರೊಂದಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ಬಂದಿದೆ. ಈಗ ಇರುವ ಪ್ರಶ್ನೆ ಮೋದಿ ಸಮಾರಂಭಕ್ಕೆ ಹೋಗ್ತಾರಾ? ಅಥವಾ ಇಲ್ಲವಾ?

ನವದೆಹಲಿ[ಆ.2] ಪಾಕಿಸ್ತಾನದ ಪ್ರಧಾನಿಯ ಪದಗ್ರಹಣ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಚಿಂತನೆ ನಡೆಸಿರುವುದು ಗೊತ್ತೆ ಇದೆ.

ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ‘ ನರೇಂದ್ರ ಮೋದಿ ಈ ವಿಚಾರದಲ್ಲಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರೌಢರಿದ್ದಾರೆ.  ಪ್ರತಿಕ್ರಿಯೆ ನೀಡಲು ನಾನ್ನಿಂದ ಸಾಧ್ಯವಿಲ್ಲ. ಈ ವಿಚಾರ ನನಗೆ ಸಂಬಂಧಿಸಿದ್ದು ಅಲ್ಲ. ಪ್ರಧಾನಿ ಸ್ಥಾನದಲ್ಲಿರುವ ಅವರ ಮೇಲೆ ಗೌರವ ಇದೆ’ ಎಂದಿದ್ದಾರೆ. 

ಭಾರತದಲ್ಲಿ ಇಮ್ರಾನ್ ಖಾನ್ ಗೆ ಎಷ್ಟು ಮಕ್ಕಳು..! ಅವರ್ಯಾರು..?

ನವಾಜ್ ಷರೀಫ್ ಬಂದಿದ್ದರು: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಬಂದಿದ್ದರು. 2015ರಲ್ಲಿ ವಿದೇಶದಿಂದ ಹಿಂದಿರುಗುತ್ತಿದ್ದ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಷರೀಫ್ ಗೆ ಜನ್ಮದಿನದ ಶುಭಾಶಯ ತಿಳಿಸಿದ್ದರು. ಆದರೆ ಇದಾದ ಮೇಲೆ 2016ರಲ್ಲಿ ಭಾರತದ ಸೖನಿಕ ನೆಲೆಗಳ ಮೇಲೆ ಪಾಕಿಸ್ತಾನ ಕಾರಣವಿಲ್ಲದೇ ದಾಳಿ ಮಾಡಿತ್ತು.  ಅಲ್ಲಿಂದ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿ ಹೋಗಿತ್ತು.

ರಾಜತಾಂತ್ರಿಕ ಸಂಬಂಧ ಸುಧಾರಣೆ: ಈ ಹಿಂದೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನವನ್ನು ಭಾರತ ಬಹಿಷ್ಕಾರ ಮಾಡಿತ್ತು. ಆದರೆ ಇದೀಗ ಪಾಕಿಸ್ತಾನದಲ್ಲಿ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಏಷ್ಯಾ ಖಂಡದದಲ್ಲಿ ಹೊಸ ಶಕೆ ಆರಂಭಕ್ಕೂ ಇದು ವೇದಿಕೆಯಾಗಬಹುದು.

 

click me!