ಸಿಎಂ ಕುಮಾರಸ್ವಾಮಿ ವಿರುದ್ಧ ಸುಪ್ರೀಂಗೆ ಹೊರಟ ಸೇನೆ!?

By Web DeskFirst Published Aug 2, 2018, 9:12 PM IST
Highlights

ಒಂದೆಡೆ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಕೂಗು ಜೋರಾಗಿದ್ದರೆ ಅತ್ತ ಬೆಳಗಾವಿ ವಿಚಾರದಲ್ಲಿ ಶಿವಸೇನೆ ಕ್ಯಾತೆ ತೆಗೆದಿದೆ. ಅಷ್ಟಕ್ಕೂ ಶಿವಸೇನೆ ಈ ತಕರಾರು ತೆಗೆಯಲು ಕಾರಣವೇನು? ಇಲ್ಲಿದೆ ಉತ್ತರ

ಬೆಳಗಾವಿ[ಆ.2]  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ದಿಯ ದೃಷ್ಟಿಯಿಂದ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿಸುವ ಮಾತನಾಡಿದ್ದಕ್ಕೆ ಶಿವಸೇನೆ ಸುಪ್ರೀಂ ಕೋರ್ಟ್ ಗೆ ಹೋಗಬೇಕು ಎಂದು ಹೇಳಿದೆ.

ಮಹಾರಾಷ್ಟ್ರ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್ ಗೆ ತೆರಳಬೇಕು, ಕರ್ನಾಟಕ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ದಲ್ಲಿ ಆಗ್ರಹಿಸಿದೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಿದ ಬೆನ್ನಲ್ಲೇ ಕುಮಾರಸ್ವಾಮಿ ಉತ್ತರ ಕರ್ನಾಟಕ ಅಭಿವೃದ್ದಿ ದೃಷ್ಟಿಯಿಂದ ರಾಜ್ಯದ ಕೆಲ ಪ್ರಮುಖ ಇಲಾಖೆಗಳನ್ನು ಬೆಳಗಾವಿಗೆ ಸ್ಥಳಾಂತರಿಸುತ್ತೇವೆ ಎಂದಿದ್ದರು. ಪ್ರತ್ಯೇಕ ರಾಜ್ಯ ಹೋರಾಟಗಾರರು ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಿ ಎಂದು ಒತ್ತಾಯಿಸಿದ್ದರು. ಆದರೆ ಬೆಳಗಾವಿ ವಿವಾದ ಇನ್ನು ನ್ಯಾಯಾಲಯದಲ್ಲಿದ್ದು ಕುಮಾರಸ್ವಾಮಿ ಹೇಳಿಕೆ ವಿರುದ್ಧ ಸುಪ್ರೀಂ ಮೆಟ್ಟಿಲೇರಬೇಕು ಎಂಬುದು ಶಿವಸೇನೆ ವಾದ.

ಸಾಮ್ನಾದ  ಸಂಪಾದಕೀಯದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ ಕರ್ನಾಟಕದ ವಾದ ಅಥವಾ ಪ್ರತ್ಯೇಕ ರಾಜ್ಯದ ವಿಚಾರ ಏನೇ ಇರಲಿ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೋರಾಟ ಮಾಡುತ್ತಿರುವವರು ನ್ಯಾಯಾಲಯದ ಮೊರೆ ಹೋಗಬೇಕು ಎಂದು ಹೇಳಿದೆ.

click me!