ಭೀಮಾ ತೀರದಲ್ಲಿ ಮತ್ತೆ ರಕ್ತದೋಕುಳಿ : ಪ್ರಾಣಾಪಾಯದಿಂದ ಪಾರಾದ ಬಾಗಪ್ಪ ಹರಿಜನ

By Suvarna Web Desk  |  First Published Aug 8, 2017, 10:00 PM IST

ಪೈರಿಂಗ್ ನಲ್ಲಿ 5 ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಬಾಗಪ್ಪನನ್ನು ಬಿಎಲ್‌ಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ದೇಹದಲ್ಲಿದ್ದ 4 ಗುಂಡುಗಳನ್ನು ವೈದ್ಯರು ಹೊರ ತೆಗೆದಿದ್ದು, ಪ್ರಣಾಪಾಯದಿಂದ ಬಾಗಪ್ಪ  ಪಾರಾಗಿದ್ದಾನೆ.


ವಿಜಯಪುರ(ಆ.08): ಕೆಲ ವರ್ಷಗಳಿಂದ ತಣ್ಣಗಿದ್ದ ಭೀಮಾತೀರದ ಪಾತಕ ಲೋಕ ರಿಲೋಡ್ ಆಗಿದೆ. ಭೀಮಾತೀರದ ಹಂತಕರಲ್ಲೆ ಮೋಸ್ಟ್ ನಟೋರಿಯಸ್ ಅನ್ನೋ ಕುಖ್ಯಾತಿ ಪಡೆದಿರುವ ಬಾಗಪ್ಪ ಹರಿಜನ್ ಮೇಲೆ ಹಾಡುಹಗಲೆ ಗುಂಡಿನ ದಾಳಿ ನಡೆದಿದೆ. ನಾಲ್ಕು ಗುಂಡುಗಳನ್ನು ದೇಹದಿಂದ ಹೊರತೆಗೆಯಲಾಗಿದ್ದು, ಪ್ರಣಾಪಾಯದಿಂದ ಬಾಗಪ್ಪ ಪಾರಾಗಿದ್ದಾನೆ.

ಬೆಳಗ್ಗೆ 10.30ರ ಸುಮಾರಿಗೆ 2014ರಲ್ಲಿ ನಡೆದ ಬಸವರಾಜ್ ಹರಿಜನ್ ಹತ್ಯೆ ಪ್ರಕರಣದ ವಿಚಾರಣೆಗಾಗಿ ಬಾಗಪ್ಪ ಹರಿಜನ್ ಕೋರ್ಟ್‌ಗೆ ಬಂದಿದ್ದ. ತನ್ನ ಸ್ಕಾರ್ಪಿಯೋ ವಾಹನದಿಂದ ಕೆಳಗೆ ಇಳಿದು  ಹೋಗುತ್ತಿದ್ದಾಗ, ಹಿಂದೆಯಿಂದ  ಬಂದ ದುಷ್ಕರ್ಮಿಯೋರ್ವ, ತನ್ನ ಬ್ಯಾಗ್‌ನಲ್ಲಿದ್ದ ಬಂದುಕು ತೆಗೆದು 5 ಸುತ್ತು ಫೈರಿಂಗ್ ಮಾಡಿ ಪರಾರಿಯಾಗಿದ್ದಾನೆ.

Latest Videos

undefined

ಇನ್ನು ಘಟನೆಯ ಸುದ್ದಿ ಕೇಳುತ್ತಿದಂತೆ ಬಾಗಪ್ಪ ಸಹಚರರು, ಬೆಂಬಲಿಗರು ಕೋರ್ಟ್  ಆವರಣದಲ್ಲಿ ಜಮಾಯಿಸಿದರು. ಎಸ್ಪಿ ಕುಲದೀಪ್ ಕುಮಾರ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಸಿಪಿಐ ಸುನೀಲ ಕಾಂಬಳೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಪೈರಿಂಗ್ ನಲ್ಲಿ 5 ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಬಾಗಪ್ಪನನ್ನು ಬಿಎಲ್‌ಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ದೇಹದಲ್ಲಿದ್ದ 4 ಗುಂಡುಗಳನ್ನು ವೈದ್ಯರು ಹೊರ ತೆಗೆದಿದ್ದು, ಪ್ರಣಾಪಾಯದಿಂದ ಬಾಗಪ್ಪ  ಪಾರಾಗಿದ್ದಾನೆ.

ಬಾಗಪ್ಪ ಹರಿಜನ್ ಯಾರು ?

ನಟೋರಿಯಸ್ ಕಿಲ್ಲರ್ ಚಂದಪ್ಪ ಹರಿಜನ್ ಜೊತೆಗಿದ್ದ ಬಾಗಪ್ಪ

ಮುತ್ತು ಮಾಸ್ತರ್, ಬಸವರಾಜ್ ಹತ್ಯೆ ಪ್ರಕರಣದ ಆರೋಪಿ

ಇಂಡಿ ಕಂಡೆಕ್ಟರ್ ಸುರೇಶ್ ಲಾಳಸಂಗಿ ಹತ್ಯೆ ಪ್ರಕರಣದಲ್ಲೂ ಭಾಗಿ

2015ರ ಜುಲೈ 17 ರಂದು ದರ್ಗಾ ಜೈಲು ಸೇರಿದ್ದ ಬಾಗಪ್ಪ

 1997 ರಿಂದಲೂ ಬಾಗಪ್ಪ,  ಭೀಮಾತೀರದ ನಟೋರಿಯಸ್ ಕಿಲ್ಲರ್ ಚಂದಪ್ಪ ಹರಿಜನ್ ಜತೆಗೆ ಆತನ ಗರಡಿಯಲ್ಲಿ ಪಳಗಿದ್ದ. 2007 ರಲ್ಲಿ ಮುತ್ತು ಮಾಸ್ತರ್,  2013 ರಲ್ಲಿ ಬಸವರಾಜ್ ಹರಿಜನ್ ಹತ್ಯೆಯಲ್ಲಿ ಭಾಗಿಯಾಗಿದ್ದ. 2013 ರಲ್ಲಿ ಇಂಡಿ ಕಂಡೆಕ್ಟರ್ ಸುರೇಶ್ ಲಾಳಸಂಗಿ ಹತ್ಯೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ. 2015ರ ಜುಲೈ 17 ರಂದು ಬಾಗಪ್ಪ ಪೊಲೀಸರಿಗೆ ಕೈಗೆ ಸಿಕ್ಕಿ ದರ್ಗಾ ಜೈಲು ಸೇರಿದ್ದ.

ಇನ್ನೂ ಕೋರ್ಟ್‌ನಲ್ಲಿ ಸಿಸಿಟಿವಿ ಅಳವಡಿಸುವಂತೆ ಒತ್ತಾಯಿಸಿ, ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬಾಗಪ್ಪ ಹರಿಜನ್ ಗುಂಡಿನ ದಾಳಿಯ ಹಿಂದೆ ಭೀಮಾ ತೀರದ ಹಂತಕ ಚಂದಪ್ಪ ಹರಿಜನ್​ ಅಣ್ಣ ಯಲ್ಲಪ್ಪ ಹರಿಜನ್ ಕೈವಾಡವಿರೋ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- ಪ್ರಸನ್ನ, ವಿಜಯಪುರ,  ಸುವರ್ಣನ್ಯೂಸ್

 

click me!