ಕುಖ್ಯಾತ ದರೋಡೆಕೋರರಾದ ಉಮೇಶ ಮಾಳಗಿ ಮತ್ತು ಬಾಬು ಅಲಿಯಾಸ್ ಬಾಬ್ಯಾ ಎನ್ನುವವರ ಮೇಲೆ ಫೈರಿಂಗ್ ನಡೆದಿದ್ದು, ಇಬ್ಬರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಲ್ಬುರ್ಗಿ[ಅ.19]: ಪೊಲೀಸರಿಂದ ಇಂದು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ವ್ಯಕ್ತಿಯೋರ್ವರನ್ನು ಬಂಧಿಸಿ ಒಂದು ಲಕ್ಷ ರುಪಾಯಿಗಳಿಗೆ ಬೇಡಿಕೆಯಿಟ್ಟಿದ್ದ ಖತರ್’ನಾಕ್ ದರೋಡೆಕೋರರ ಮೇಲೆ ಕಲ್ಬುರ್ಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಕುಖ್ಯಾತ ದರೋಡೆಕೋರರಾದ ಉಮೇಶ ಮಾಳಗಿ ಮತ್ತು ಬಾಬು ಅಲಿಯಾಸ್ ಬಾಬ್ಯಾ ಎನ್ನುವವರ ಮೇಲೆ ಫೈರಿಂಗ್ ನಡೆದಿದ್ದು, ಇಬ್ಬರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಖಚಿತ ಮಾಹಿತಿಯೊಂದಿಗೆ ಪೊಲೀಸರು ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ. ಈ ಕಾಳಗದಲ್ಲಿ ಆರ್ ಜಿ ನಗರ ಪಿಎಸ್ಐ ಅಕ್ಕಮಹಾದೇವಿ ಹಾಗೂ ಮೂವರು ಪೇದೆಗಳಿಗೆ ತೀವ್ರ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಚೌಕ್ ಠಾಣೆ ಇನ್ಸ್’ಪೆಕ್ಟರ್ ಹಿರೇಮಠರಿಂದ ದರೋಡೆಕೋರ ಮೇಲೆ ಫೈರಿಂಗ್ ಮಾಡಿ ನೆಲಕ್ಕುರುಳಿಸಿದರು.
ಗಾಯಾಳು ಪೊಲೀಸರನ್ನು ನಗರದ ಖಾಸಗಿ ಆಸ್ಫತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕಲ್ಬುರ್ಗಿ ಎಸ್ಪಿ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.