
ಕೊಪ್ಪಳ(ಮಾ.28): ಈ ಬರಗಾಲದಲ್ಲಿ ನೂರಾರು ಅಡಿ ಆಳ ಬಾವಿ ತೋಡಿದರೂ ನೀರು ಸಿಗುವುದು ಕಷ್ಟ. ಆದರೆ ಇದು ನಟ ಯಶ್ ಸಂಕಲ್ಪಕ್ಕೆ ಸಿಕ್ಕ ಫಲವೋ, ಅಥವಾ ಈ ಭಾಗದ ಜನರ ಅದೃಷ್ಟವೋ ಗೊತ್ತಿಲ್ಲ. ಹೂಳೆತ್ತುತ್ತಿದ್ದ ಕೆರೆಯಲ್ಲಿ ಕೇವಲ 8 ಅಡಿ ಆಳದಲ್ಲಿ ಅಂತರ್ಜಲ ಜಿನುಗಲಾರಂಭಿಸಿದೆ. ಹಾಗಾದರೆ ಯಾವುದಪ್ಪಾ ಆ ಕೆರೆ? ನಟ್ ಯಶ್ ಗೂ ಆ ಕೆರೆಗೂ ಏನು ಸಂಬಂಧ ಅಂತೀರಾ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ 96 ಎಕರೆ ಪ್ರದೇಶದ ಈ ಕೆರೆ ಬರಡು ಭೂಮಿಯಂತಾಗಿತ್ತು. ಇದೇ ಕೆರೆಯನ್ನು ನಂಬಿಕೊಮಡಿದ್ದ ಜನ ನೀರಿಗಾಗಿ ಪರದಾಡುತ್ತಿದ್ದರು. ಅದರಲ್ಲೂ ಕಳೆದ ಎರಡು ಮೂರು ವರ್ಷಗಳಿಂದ ಈ ಭಾಗದ ಜನರು ತೀವ್ರ ಬರಗಾಲದಿಂದ ಬೆಂದು ಹೋಗಿದ್ದರು. ಕುಡಿಯಲು ನೀರಿಲ್ಲದೇ ತತ್ತರಿಸಿ ಹೋಗಿದ್ದ ಜನರ ಪಾಲಿಗೆ ಭಗೀರಥನಂತೆ ಬಂದವರು ನಟ ಯಶ್. ಕಳೆದ ತಿಂಗಳು 28 ರಂದು ಯಶ್, ತಮ್ಮ ಯಶೋಮಾರ್ಗ ಫೌಂಡೇಷನ್ ವತಿಯಿಂದ, ತಲ್ಲೂರು ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ, ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದರು. ಇದೀಗ ಕೇವಲ 8 ಅಡಿ ಆಳದಲ್ಲೇ ಜೀವಜಲ ಜಿನುಗುತ್ತಿದೆ.
ನಟ ಯಶ್ ಅವರ ಕೆರೆ ಹೂಳೆತ್ತುವ ಕೆಲಸಕ್ಕೆ ಸ್ಥಳೀಯರೂ ಸಾಥ್ ನೀಡಿದ್ದಾರೆ. ತಮ್ಮ ಸ್ವಂತ ಖರ್ಚಿನಿಂದ ಟ್ರ್ಯಾಕ್ಟರ್ ಮೂಲಕ ಹೂಳೆತ್ತಿಸಿದ ಆ ಮಣ್ಣನ್ನು ತಮ್ಮದೇ ಹೊಲಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ಕೆರೆ ಸಂಪೂರ್ಣ ಭರ್ತಿಯಾದರೆ 20 ಕಿಲೋಮೀಟರ್ ವ್ಯಾಪ್ತಿಯ ಸರಿ ಸುಮಾರು 10 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ನೀರಾವರಿಯಾಗುತ್ತದೆ. ಒಟ್ಟಿನಲ್ಲಿ ಬರದಿಂದ ಕಂಗೆಟ್ಟಿದ್ದ ಜನರಿಗೆ ಯಶ್ ಹೊಸದೊಂದು ಆಶಾಕಿರಣವಾಗಿದ್ದಾರೆ. ಇತ್ತ ಗ್ರಾಮಸ್ಥರಿಗೂ ಖುಷಿಯಾಗಿದ್ದು ಇದು ಇತರ ಕಲಾವಿದರಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.