'ವಿಜಯ್ ಮಲ್ಯ ಸಾಲ ಮನ್ನಾ ಮಾಡ್ತೀರಿ, ನಮ್ಮ ಸಾಲವನ್ನೂ ಮನ್ನಾ ಮಾಡಿ'

Published : Nov 25, 2016, 03:04 AM ISTUpdated : Apr 11, 2018, 12:45 PM IST
'ವಿಜಯ್ ಮಲ್ಯ ಸಾಲ ಮನ್ನಾ ಮಾಡ್ತೀರಿ, ನಮ್ಮ ಸಾಲವನ್ನೂ ಮನ್ನಾ ಮಾಡಿ'

ಸಾರಾಂಶ

ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೀರಿ, ನಮ್ಮ ಸಾಲವನ್ನು ಮನ್ನಾ ಮಾಡಿ. ಹೀಗಂತಾ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಎಸ್‍ಬಿಐ ಬ್ಯಾಂಕ್‌'ಗೆ ಅರ್ಜಿಯೊಂದು ಬಂದಿದೆ. ಈ ಅರ್ಜಿಯನ್ನು ಸಲ್ಲಿಸಿರುವವರು ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಸುನಂದಮ್ಮ ಮತ್ತು ಪುತ್ರ ಸುಧಾಕರ್

ಮಂಡ್ಯ(ನ.25): ಆ ಕುಟುಂಬ ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್'ನಲ್ಲಿ  ಸಾಲ ಪಡೆದಿತ್ತು. ಭೀಕರ  ಬರ ಹಿನ್ನೆಲೆಯಲ್ಲಿ  ಕಳೆದ ಮೂರು ವರ್ಷಗಳಿಂದ ಸಾಲ ಪಾವತಿ ಮಾಡಿರಲಿಲ್ಲ. ಆದರೆ ಇದೀಗ ಕುಟುಂಬ ಸಾಲ ಕೊಟ್ಟಿದ್ದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ಬ್ಯಾಂಕ್‌ ಅಧಿಕಾರಿಗಳಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಅರ್ಜಿಯಲ್ಲಿ ಏನು ಇದೆ ಅಂತೀರಾ?ಇಲ್ಲಿದೆ ವಿವರ

ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೀರಿ, ನಮ್ಮ ಸಾಲವನ್ನು ಮನ್ನಾ ಮಾಡಿ. ಹೀಗಂತಾ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಎಸ್‍ಬಿಐ ಬ್ಯಾಂಕ್‌'ಗೆ ಅರ್ಜಿಯೊಂದು ಬಂದಿದೆ. ಈ ಅರ್ಜಿಯನ್ನು ಸಲ್ಲಿಸಿರುವವರು ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಸುನಂದಮ್ಮ ಮತ್ತು ಪುತ್ರ ಸುಧಾಕರ್

7 ಎಕರೆ ಕೃಷಿ ಜಮೀನು ಹೊಂದಿರುವ ಇವರು ಶಿವಪುರ ಎಸ್‌ಬಿಐ ಬ್ಯಾಂಕ್‌'ನಲ್ಲಿ ರೇಷ್ಮೆ ಕೃಷಿಗಾಗಿ 40 ಸಾವಿರ ಜೊತೆಗೆ  4.5 ಲಕ್ಷ ಟ್ರ್ಯಾಕ್ಟರ್ ಸಾಲ ಪಡೆದಿದ್ದರು. ಆದರೆ ಭೀಕರ ಬರ ಹಿನ್ನೆಲೆ ಸಾಲ ಪಾವತಿ ಮಾಡಿರಲಿಲ್ಲ. ಈಗ ಬಡ್ಡಿ ಸಮೇತ 10 ಲಕ್ಷ ಆಗಿದೆ. ಇದ್ರಿಂದ ಈ ಬಡ ಕುಟುಂಬ ಉದ್ಯಮಿ ಮಲ್ಯಗೆ ಎಸ್ ಬಿ ಐ ಬ್ಯಾಂಕ್ ಸಾಲ ಮನ್ನಾ ಮಾಡಿರುವುದನ್ನು ಮುಂದಿಟ್ಟು ಈಗ ಶಿವಪುರದ ಬ್ಯಾಂಕ್ ಗೆ ಮಲ್ಯ ರೀತಿ ನಮಗೂ ಸಾಲ ಮನ್ನಾ ಮಾಡುವಂತೆ ಅರ್ಜಿ ಸಲ್ಲಿಸಿದೆ.

ಮಳೆ ಬರದೆ ಜಮೀನಿನಲ್ಲಿ ಕೃಷಿ ಮಾಡಿಲ್ಲ. ಮಾಡಿರುವ ಸಾಲ ತೀರಿಸುವ ದಾರಿ ಕಾಣುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮನಸು ಒಪ್ಪುತ್ತಿಲ್ಲ. ಹೀಗಾಗಿ ಬ್ಯಾಂಕ್ ಸಾಲ ಮನ್ನಾ ಮಾಡಿ ರೈತರನ್ನು ಬದುಕಿಸಿ ಎನ್ನುತ್ತಿದ್ದಾರೆ ಸುನಂದಮ್ಮ.

ವಿಜಯ ಮಲ್ಯ ಮಾಡಿರುವ ಸಾಲ ಮನ್ನಾ ಮಾಡುತ್ತದೋ ಮಾಡಲ್ವಾ ಗೊತ್ತಿಲ್ಲ. ಆದ್ರೆ ರೈತರ ಸಾಲ ಮನ್ನಾ ಮಾಡಿ ರೈತರನ್ನು ಬದುಕಿಸಿ ಎಂಬುದು ರೈತರ ಮನವಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ