ಬಿಜೆಪಿಯೊಂದಿಗಿನ 25 ವರ್ಷದ ಮೈತ್ರಿ ವ್ಯರ್ಥ

By Suvarna Web DeskFirst Published Jan 28, 2017, 10:57 AM IST
Highlights

ತನ್ನ ಲಾಭಕ್ಕಾಗಿ ಬಿಜೆಪಿ, ಛತ್ರಪತಿ ಶಿವಾಜಿ ಹಾಗೂ ಲೋಕಮಾನ್ಯ ತಿಲಕ್ ಅವರನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯಲೂ ಹಿಂಜರೆಯದು ಎಂದು ಶಿವಸೇನೆ ಆರೋಪಿಸಿದೆ.

ಮುಂಬೈ(ಜ.28): ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಗೊಳಿಸಿರುವ ಶಿವಸೇನೆ, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ 25 ವರ್ಷ ವ್ಯರ್ಥವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿರುವ ಶಿವಸೇನೆ, ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ತನ್ನ ಜಾತ್ಯಾತೀತತೆಯನ್ನು ತೋರಿಸಿಕೊಳ್ಳಲು ಬಿಜೆಪಿ ತನ್ನ ಮೂಲ ಉದ್ದೇಶಗಳಿಂದ ದೂರ ಸರಿದಿದೆ. ತನ್ನ ಲಾಭಕ್ಕಾಗಿ ಬಿಜೆಪಿ, ಛತ್ರಪತಿ ಶಿವಾಜಿ ಹಾಗೂ ಲೋಕಮಾನ್ಯ ತಿಲಕ್ ಅವರನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯಲೂ ಹಿಂಜರೆಯದು ಎಂದು ಶಿವಸೇನೆ ಆರೋಪಿಸಿದೆ.

ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಯ ಸಲುವಾಗಿ ಬಿಜೆಪಿಯ ಧೋರಣೆಯನ್ನು ಕಳೆದ 25 ವರ್ಷಗಳಿಂದ ಸಹಿಸಿಕೊಂಡು ಬರುತ್ತಿದ್ದೇವೆ. ಆದರೆ ಅವೆಲ್ಲವೂ ಈಗ ವ್ಯರ್ಥವಾಗಿದೆ. 25 ವರ್ಷದ ಹಿಂದೆ ಆಗಬೇಕಿದ್ದದ್ದು ಈಗ ನಡೆದಿದೆ ಎಂದು ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಅಂತ್ಯಗೊಳಿಸಿರುವುದರ ಬಗ್ಗೆ ಹೇಳಿದೆ.

click me!