ಬಿಜೆಪಿಯೊಂದಿನ ಮೈತ್ರಿ ಕಡಿದುಕೊಳ್ಳಲಿದೆಯಾ ಶಿವಸೇನೆ?

Published : Sep 18, 2017, 06:24 PM ISTUpdated : Apr 11, 2018, 12:45 PM IST
ಬಿಜೆಪಿಯೊಂದಿನ ಮೈತ್ರಿ ಕಡಿದುಕೊಳ್ಳಲಿದೆಯಾ ಶಿವಸೇನೆ?

ಸಾರಾಂಶ

ಶಿವಸೇನಾ ಮತ್ತು ಬಿಜೆಪಿ ನಡುವಿನ ಅಪಸ್ವರ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬಗ್ಗೆ ಶಿವಸೇನೆ ಸೂಚನೆ ನೀಡಿದೆ.

ಮುಂಬೈ (ಸೆ.18): ಶಿವಸೇನಾ ಮತ್ತು ಬಿಜೆಪಿ ನಡುವಿನ ಅಪಸ್ವರ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬಗ್ಗೆ ಶಿವಸೇನೆ ಸೂಚನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಬೆಲೆಯೇರಿಕೆ ಹಾಗೂ ರೈತರ ಸಮಸ್ಯೆಯನ್ನೂ ಸರ್ಕಾರ ಇನ್ನೂ ಬಗೆಹರಿಸಿಲ್ಲ. ಇದಕ್ಕೆ ನಾವು ಜಬಾಬ್ದಾರರಲ್ಲ. ಜನರು ಸರ್ಕಾರಕ್ಕೆ ಬೈಯುವುದನ್ನು ನಾವು ಹಂಚಿಕೊಳ್ಳುವುದಿಲ್ಲ. ಬಿಜೆಪಿಯೊಂದಿಗೆ ಮುಂದುವರೆಯಬೇಕಾ, ಬೇಡವಾ ಎನ್ನುವುದರ ಬಗ್ಗೆ ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಶಿವಸೇನಾ ಮುಖ್ಯಸ್ಥ ಸಂಜಯ್ ರೌತ್ ಹೇಳಿದ್ದಾರೆ.

ಬೆಲೆಯೇರಿಕೆ ವಿಚಾರವಾಗಿ ನಮಗೆ ಜನರನ್ನು ಎದುರಿಸುವುದು ಕಷ್ಟವಾಗಿದೆ. ಬೆಲೆಯೇರಿಕೆಯನ್ನು ನಿಯಂತ್ರಿಸಲು ಬಿಜೆಪಿಗೆ ನಾವು ಮನವಿ ಮಾಡಿಕೊಂಡಿದ್ದೇವೆ. ಸರ್ಕಾರದ ಒಂದು ಭಾಗವಾಗಿದ್ದೇವೆ ಅಂದ ಮಾತ್ರಕ್ಕೆ ನಾವು ಬೆಲೆ ಹೆಚ್ಚಳವನ್ನು ಬೆಂಬಲಿಸುತ್ತೇವೆ ಎಂದರ್ಥವಲ್ಲ.  ಮೈತ್ರಿಯನ್ನು ಮುಂದುವರೆಸಬೇಕೆ? ಬೇಡವೇ ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ ಎಂದು ಸಂಜಯ್ ರೌತ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ