ಅಚ್ಚರಿ ಬೆಳವಣಿಗೆ : ಶಿರಡಿ ಸಾಯಿ ಬಾಬ ಕಾಣಿಸಿಕೊಂಡಿದ್ದೆಲ್ಲಿ..?

By Web DeskFirst Published Aug 30, 2018, 1:20 PM IST
Highlights

ಅಚ್ಚರಿದಾಯಕ ಬೆಳವಣಿಗೆಯೊಂದರಲ್ಲಿ ಶಿರಡಿಯ ಸಾಯಿಬಾಬ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡುವ ವೇಳೆ ವ್ಯಕ್ತಿಯೋರ್ವ ಸಾಯಿಬಾಬ ಹೆಸರಲ್ಲಿ ಅರ್ಜಿ ಭರ್ತಿ ಮಾಡಿರುವುದು ತಿಳಿದು ಬಂದಿದೆ. 

ಶಿರಡಿ : ಅಪರೂಪದ ಮತ್ತು ಅಚ್ಚರಿದಾಯಕ ಬೆಳವಣಿಗೆಯೊಂದು ನಡೆದಿದ್ದು , ವ್ಯಕ್ತಿಯೋರ್ವ ಶಿರಡಿ ಸಾಯಿಬಾಬ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. 

ಮಹರಾಷ್ಟ್ರದ ಅಹಮದ್ ನಗರ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚುನಾವಣಾಧಿಕಾರಿಗಳು ಆನ್ ಲೈನ್ ಅರ್ಜಿಗಳನ್ನು ಪರಿಶೀಲನೆ ಮಾಡುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲು ಮಾಡಿದ್ದಾರೆ. 

Latest Videos

ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲು ಮಾಡಲಾಗಿದೆ. ಅಲ್ಲದೇ ಇದೀಗ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ. ಈ ಘಟನೆ ಕಳೆದ ವರ್ಷ ಡಿಸೆಂಬರ್ ನಲ್ಲಿಯೇ ಘಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

click me!