
ಬೆಂಗಳೂರು : ವ್ಯಾಪಾರಿಗಳಿಂದ ಕದ್ದು ಮುಚ್ಚಿ ಪಿಒಪಿ ಗಣೇಶ ವಿಗ್ರಹಗಳನ್ನು ಖರೀದಿಸಿ ಕೂರಿಸಲು ಮುಂದಾದರೆ ತೊಂದರೆ ಎದುರಿಸುವುದು ನಿಶ್ಚಿತ. ಏಕೆಂದರೆ ಮೂರ್ತಿ ಕೂರಿಸಲು ನೀವು ಬಿಬಿಎಂಪಿ ಅನುಮತಿ ಪಡೆಯಲು ಸಾಧ್ಯವಾಗುವುದಿಲ್ಲ.
ಈ ಪಿಒಪಿ ಗಣಪತಿ ವಿಗ್ರಹಗಳನ್ನು ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಾಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್, ಸೆಣಬು, ಅಂಟು ವಸ್ತುಗಳು ಹಾಗೂ ಸಂಯೋಜಿತ ಬಣ್ಣಗಳಿಂದ ತಯಾರಿಸಲಾಗಿರುತ್ತದೆ. ಥರ್ಮಾಕೋಲ್ ನೀರಿನಲ್ಲಿ ಕರಗುವುದಿಲ್ಲ.
ಸಂಯೋಜಿತ ಬಣ್ಣಗಳಲ್ಲಿ ಅಪಾಯಕಾರಿ ಭಾರ ಲೋಹಗಳಾದ ಕ್ರೋಮಿಯಂ, ಸೀಸ, ನಿಕ್ಕಲ್, ಕ್ಯಾಡ್ಮಿಯಂ, ಸತು ಮುಂತಾದವುಗಳಿರುತ್ತವೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಕ್ಯಾನ್ಸರ್ ಕಾರಕವಾದ ಅಸ್‌ಬೆಸ್ಟಾಸ್ ಅಂಶವಿರುತ್ತದೆ. ಗಣಪತಿ ವಿಗ್ರಹಕ್ಕೆ ಹಚ್ಚುವ ತೈಲ ವರ್ಣದಲ್ಲಿ ವಿಷ ರಾಸಾಯನಿಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.