ಕೇಳಲೇಬೇಕು..ಪ್ರಾಣಿಗಳ ಉದ್ದೇಶಿಸಿ ಕಾಂಗ್ರೆಸ್ ‘ಬೆಚ್ಚಪ್ಪ’ನ ಭಾಷಣ!

First Published Jul 10, 2018, 6:50 PM IST
Highlights

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ರಾಜಕೀಯ ಪಕ್ಷಗಳು ಲೋಕಸಭಾಗೆ ಸಿದ್ಧವಾಗುತ್ತಿವೆ. ಆದರೆ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಳಸಿಕೊಂಡ ಬ್ಯಾನರ್, ಬಾವುಟಗಳು ಇಂದು ನೈಜ ಉಪಯೋಗ ನೀಡುತ್ತಿವೆ.. ಹೇಗೆ ಅಂತೀರಾ ? ಇದನ್ನು ಓದಿ..

ಶಿವಮೊಗ್ಗ[ಜು.10]  ಕಾಡಿನಂಚಿನ ತೋಟ , ಹೊಲ , ಗದ್ದೆಗೆ ದಾಳಿ ಇಡುವ ಹಂದಿ , ಮಂಗಗಳನ್ನ ಬೆದರಿಸಲು ಬೆದರು ಗೊಂಬೆ[ಬೆಚ್ಚು]ಗಳನ್ನು ಬಳಸುವುದನ್ನು ರೈತರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ ಹೊಲ-ಗದ್ದೆಗಳಲ್ಲಿ ಈ ಬೆಚ್ಚಪ್ಪಗೆ ಒಂದು ಸ್ಥಾನ ಖಾಯಂ.

ಆದರೆ ಚಿತ್ರದಲ್ಲಿ ಕಾಣುತ್ತಿರುವ ಚೆಚ್ಚಪ್ಪನ ಕೈಯಲ್ಲಿ ಕಾಂಗ್ರೆಸ್ ಧ್ವಜವಿದೆ. ಚುನಾವಣೆ ಮುಗಿದ ಬಳಿಕ ಪಕ್ಷಗಳ ಧ್ವಜಗಳು ಹೇಗೆಲ್ಲಾ ಬಳಕೆಗೆ ಬರುತ್ತವೆ ಎಂಬುದು ಮಲೆನಾಡಿಗರನ್ನು ನೋಡಿ ಕಲಿಯಬೇಕು ಎಂದು ನೀವು ಭಾವಿಸಿದರೂ ತಪ್ಪಲ್ಲ. ಕಾಂಗ್ರೆಸ್ ಪಕ್ಷದ ಪಾರಮ್ಯ ಹೇಗಿದೆ ನೀವೇ ನೋಡಿ!

ಸಾಗರದ ಆನಂದಪುರಂ ಬಳಿಯ ಹಳ್ಳಿಗಳಾದ ಹೊಸಕೊಪ್ಪ , ಕಣ್ಣೂರು , ಗೌತಮಪುರ ಭಾಗದಲ್ಲಿನ ಬಗರ್ ಹುಕುಂ ಜಮೀನಿಗೆ ಈ ಧ್ವಜಗಳೇ ಕಾವಲು. ಯಾವ ಪ್ರಮಾಣದಲ್ಲಿ ಪ್ರಾಣಿಗಳ ಮೇಲೆ ಪ್ರಭಾವ ಬೀರುತ್ತದೆಯೋ ಗೊತ್ತಿಲ್ಲ. ಆದರೆ ನಿಜಕ್ಕೂ ಚುನಾವಣೆ ಮುಗಿದರೂ ಇಲ್ಲಿ ಪ್ರಚಾರ ನಡೆಯುತ್ತಲೇ ಇದೆ. ಜನರನ್ನು ಉದ್ದೇಶಿಸಿ ಮಾಡುತ್ತಿದ್ದ ಭಾಷಣವನ್ನು ಈಗ ಬೆಚ್ಚಪ್ಪ ಪ್ರಾಣಿಗಳನ್ನು ಉದ್ದೇಶಿಸಿ ಮಾಡುತ್ತಿರಬಹುದು!

ಮೈಕಲ್ ಜಾಕ್ಸನ್ ಹಾಡುಗಳನ್ನು ಹಾಕಿ ಪ್ರಾಣಿಗಳನ್ನು ಓಡಿಸಲಾಗುತ್ತಿತ್ತು ಎಂದು ಹಿಂದೆ ಕೇಳಿದ್ದೇವು. ಆದರೆ ಇದು ಅದೆಲ್ಲದಕ್ಕಿಂತ ಭಿನ್ನ. ಬೆಚ್ಚಪ್ಪನ ಕೈಗೆ ಕಾಂಗ್ರೆಸ್ ಧ್ವಜ ನೀಡಿ ಪ್ರಾಣಿಗಳಿಂದ ರಕ್ಷಣೆ ಪಡೆಯಬಹುದು ಎಂದು ತೋರಿಸಿಕೊಟ್ಟ ರೈತನ ಕ್ರಿಯಾಶೀಲತೆಗೆ ಸಲಾಂ ಹೇಳಲೇಬೇಕು.

click me!