
ನವದೆಹಲಿ: ಮುಂಬರುವ ಶುಕ್ರವಾರ ಬಾಬ್ರಿ ಮಸೀದಿ-ರಾಮ ಮಂದಿರ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿರುವ ಬೆನ್ನಲ್ಲೇ, ಬಾಬ್ರಿ ಮಸೀದಿ ಪ್ರಕರಣದಲ್ಲಿ ಹೊಸ ಬೆಳವಣಿಗೆ ಘಟಿಸಿದೆ.
ಬಾಬ್ರಿ ಮಸೀದಿಯ ಒಡೆತನವನ್ನು ಸುನ್ನೀ ಪಂಗಡಕ್ಕೆ ನೀಡಿದ್ದ ವಿಚಾರಣಾ ನ್ಯಾಯಾಲಯದ 71 ವರ್ಷ ಹಳೆಯ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಬೋರ್ಡ್ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯನ್ನು ಕೂಡಾ ಆಲಿಸಬೇಕೆಂದು ಅದು ಸುಪ್ರೀಂ ಕೋರ್ಟ್'ಗೆ ಮನವಿ ಮಾಡಿದೆ.
ಬಾಬ್ರಿ ಮಸೀದಿ ಒಡತನದ ಬಗ್ಗೆ ಸುನ್ನಿ ಹಾಗೂ ಶಿಯಾ ಪಂಗಡಗಳ ನಡುವಿನ ವ್ಯಾಜ್ಯವನ್ನು ಆಲಿಸಿದ್ದ ವಿಚಾರಣಾ ನ್ಯಾಯಾಲಯವು 1946 ಮಾರ್ಚ್ 30ರಂದು ಸುನ್ನೀ ಪಂಗಡ ಪರವಾಗಿ ತೀರ್ಪು ನೀಡಿತ್ತು.
ಆದರೆ ಈಗ ಶಿಯಾ ವಕ್ಫ್ ಮಂಡಳಿಯು ಆ ಆದೇಶವು ದೋಷಪೂರಿತವಾಗಿದ್ದು, ಮಸೀದಿಯನ್ನು ಬಾಬರನ ಸಚಿವ ಅಬ್ದುಲ್ ಮೀರ್ ಬಾಖಿ ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿದ್ದನ್ನು ಎಂದು ವಾದಿಸಿದೆ. ಬಾಬರ್ ಸುನ್ನಿ ಪಂಗಡಕ್ಕೆ ಸೇರಿದ್ದರೆ, ಮೀರ್ ಬಾಖಿ ಶಿಯಾ ಪಂಗಡಕ್ಕೆ ಸೇರಿದವನಾಗಿದ್ದನು.
ಅರ್ಜಿಯಲ್ಲಿ, ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಶಿಯಾ ವಕ್ಫ್ ಬೋರ್ಡ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.