ಕೇಂದ್ರ ಸಚಿವೆ ಮನೇಕಾ ಗಾಂಧಿ ಮೇಲೆ ಸಿನ್ಹಾ ದಾಳಿ

Published : Apr 09, 2017, 12:42 PM ISTUpdated : Apr 11, 2018, 12:37 PM IST
ಕೇಂದ್ರ ಸಚಿವೆ ಮನೇಕಾ ಗಾಂಧಿ ಮೇಲೆ ಸಿನ್ಹಾ ದಾಳಿ

ಸಾರಾಂಶ

ಕಳೆದ ಶನಿವಾರ ಗೋವಾದಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೆಣ್ಣಿನ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಸಿನೆಮಾಗಳೂ ಕಾರಣವೆಂದು ಮನೇಕಾ ಗಾಂಧಿ ಹೇಳಿದ್ದರು. ಪ್ರಾದೇಶಿಕ ಚಿತ್ರವಾಗಿರಲಿ ಅಥವಾ ಹಿಂದಿ ಚಿತ್ರವಾಗಿರಲಿ, ಅದರಲ್ಲಿ ನಾಯಕ-ನಾಯಕಿ ಮಧ್ಯೆ ಪ್ರೇಮ ಉಂಟಾಗುವುದು ಹೆಣ್ಣಿನ ಚುಡಾವಣೆಯಿಂದಲೇ ಎಂದ ಮನೇಕಾ ಗಾಂಧಿ ಹೇಳಿದ್ದರು.

ನವದೆಹಲಿ (ಏ.09): ಮಹಿಳೆಯರ ವಿರುದ್ಧ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಸಿನೆಮಾಗಳು ಕಾರಣವೆಂದಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಮೇಲೆ ಬಿಜಪಿ ನಾಯಕ ಶತ್ರುಘನ್ ಸಿನ್ಹಾ ಟ್ವೀಟರ್ ದಾಳಿ ನಡೆಸಿದ್ದಾರೆ.

ಮನೆಕಾ ಗಾಂಧಿಯವರು ಸರಿಯಾದ ಜನರನ್ನು ಸಮಾಲೋಚಿಸಿ, ಸರಿಯಾದ ಸಮಯದಲ್ಲಿ, ಸರಿಯಾದ ವಿಷಯವನ್ನು ಮಾತನಾಡಬೇಕು. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು, ಅಪರಾಧಗಳಿಗೆ ಸಿನೆಮಾಗಳನ್ನು ಹೊಣೆಯಾಗಿಸುವ ಹೊರತು ಬೇರೆ ರೀತಿಯ ದಾರಿಗಳಿವೆ ಎಂದು ಖಾರವಾಗಿ ಶತ್ರುಘನ್ ಸಿನ್ಹಾ ಸರಣಿ ಟ್ವೀಟ್’ಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ಭ್ರಷ್ಟಾಚಾರಕ್ಕೆ ಕಾರಣ ರಾಜಕಾರಣಿಗಳೋ ಅಥವಾ ಸಿನೆಮಾಗಳೋ ಎಂದು  ಪ್ರಶ್ನಿಸಿರುವ ಸಿನ್ಹಾ,  ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ, ದೇಶ-ವಿರೋಧಿ ಮನಸ್ಥಿತಿ, ಏರ್’ಲೈನ್ ಅಧಿಕಾರಿ ಮೇಲೆ ಹಲ್ಲೆ, ಗಲಭೆಗಳ ಬಗ್ಗೆ ಏನನ್ನುತ್ತೀರಿ? ಎಂದು ಸಿನ್ಹಾ ಮನೆಕಾ ಗಾಂಧಿಯವರನ್ನು ಕೇಳಿದ್ದಾರೆ.

ಹಾಗಾದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪಿಂಕ್, ದಂಗಾಲ್ ಚಿತ್ರಗಳ ಬಗ್ಗೆ? ಸಿನೆಮಾಗಳನ್ನು ಬಲಿಪಶು ಮಾಡುವುದು ಬೇಡ ಎಂದು ಸಿನ್ಹಾ ಮನೆಕಾ ಗಾಂಧಿಗೆ ಮನವಿ ಮಾಡಿದ್ದಾರೆ.

ಕಳೆದ ಶನಿವಾರ ಗೋವಾದಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೆಣ್ಣಿನ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಸಿನೆಮಾಗಳೂ ಕಾರಣವೆಂದು ಮನೇಕಾ ಗಾಂಧಿ ಹೇಳಿದ್ದರು. ಪ್ರಾದೇಶಿಕ ಚಿತ್ರವಾಗಿರಲಿ ಅಥವಾ ಹಿಂದಿ ಚಿತ್ರವಾಗಿರಲಿ, ಅದರಲ್ಲಿ ನಾಯಕ-ನಾಯಕಿ ಮಧ್ಯೆ ಪ್ರೇಮ ಉಂಟಾಗುವುದು ಹೆಣ್ಣಿನ ಚುಡಾವಣೆಯಿಂದಲೇ ಎಂದ ಮನೇಕಾ ಗಾಂಧಿ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌