ರಾಜ್ಯದ 2ನೇ ಅತಿ ದೊಡ್ಡ ನಗರ ಮಂಗಳೂರಿನಲ್ಲಿ ಶಾಶ್ವತ ಎನ್ ಐಎ ಕಚೇರಿ ಸ್ಥಾಪಿಸಬೇಕೆಂಬ ಬೇಡಿಕೆ ಮತ್ತೆ ಮುಂಚೂಣಿಗೆ ಬಂದಿದೆ.
ಮಂಗಳೂರು(ಜು,16): ರಾಜ್ಯದ 2ನೇ ಅತಿ ದೊಡ್ಡ ನಗರ ಮಂಗಳೂರಿನಲ್ಲಿ ಶಾಶ್ವತ ಎನ್ ಐಎ ಕಚೇರಿ ಸ್ಥಾಪಿಸಬೇಕೆಂಬ ಬೇಡಿಕೆ ಮತ್ತೆ ಮುಂಚೂಣಿಗೆ ಬಂದಿದೆ.
ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ವಿಚಾರಣೆಗೆ ಒಪ್ಪಿಸಬೇಕೆಂಬ ಬಿಜೆಪಿ ಬೇಡಿಕೆಯ ಹಿನ್ನೆಲೆಯಲ್ಲಿ ಈಗ ಮಂಗಳೂರಿನಲ್ಲಿ ಎನ್ ಐಎ ಕಚೇರಿ ಸ್ಥಾಪನೆಯಾಗಬಹುದಾ ಎಂಬ ನಿರೀಕ್ಷೆ ಮೂಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ಭಯೋತ್ಪಾದನಾ ಚಟುವಟಿಕೆಗಳ ಕುರುಹುಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ಕಾರಣದಿಂದ ಕೂಡಾ ಎನ್ ಐಎ ಕಚೇರಿ ಸ್ಥಾಪನೆಗೆ ಆಗ್ರಹ ಕೇಳಿ ಬಂದಿದೆ.
ಶರತ್ ಮಡಿವಾಳ ಸಾವಿನ ತನಿಖೆಯ ಜೊತೆಗೆ ರಾಜ್ಯ ಬಿಜೆಪಿ ನಾಯಕರಿಂದ ವ್ಯಕ್ತವಾಗಿರುವ ಎನ್ಐಎ ಕಚೇರಿ ಸ್ಥಾಪನೆ ಬೇಡಿಕೆಗೆ ಕೇಂದ್ರ ಗೃಹಸಚಿವಾಲಯದಿಂದ ಕೊಂಚ ಮಟ್ಟಿನ ಪೂರಕ ಪ್ರತಿಕ್ರಿಯೆ ವ್ಯಕ್ತಗೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು, ಕರಾವಳಿಯಲ್ಲಿ ಎನ್ಐಎ ಕಚೇರಿ ಸ್ಥಾಪನೆಯ ನಿರೀಕ್ಷೆ ಹುಟ್ಟಿಸಿದೆ.