83 ವರ್ಷದ ಇಳಿವಯಸ್ಸಲ್ಲಿ ಅಪ್ಪನಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ

Published : Nov 02, 2017, 08:34 AM ISTUpdated : Apr 11, 2018, 01:02 PM IST
83 ವರ್ಷದ ಇಳಿವಯಸ್ಸಲ್ಲಿ ಅಪ್ಪನಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ

ಸಾರಾಂಶ

ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಮತ್ತು ಅವರ ಎರಡನೇ ಪತ್ನಿ ದಾಕ್ಷಾಯಿಣಿಯವರಿಗೆ ಬುಧವಾರ ಗಂಡು ಮಗು ಜನಿಸಿದೆ. 83 ವಯಸ್ಸುನಲ್ಲಿ ಶರಣಬಸವಪ್ಪ ಅಪ್ಪನವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕಲಬುರ್ಗಿ(ನ. 02): ಶ್ರೀ ಶರಣಬಸವೇಶ್ವವರ ಸಂಸ್ಥಾನದ ಪೀಠಾಧಿಪತಿ 83 ವರ್ಷ ವಯಸ್ಸಿನ ಡಾ.ಶರಣಬಸಪ್ಪ ಅಪ್ಪಾ ಅವರ ಪತ್ನಿ ದಾಕ್ಷಾಯಿಣಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯ ಮಠದ ಭಕ್ತರಲ್ಲಿ ಸಂಭ್ರಮ ಮನೆಮಾಡಿದ್ದು, ನಿನ್ನೆ ಪಟಾಕಿ ಸಿಡಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಂಸ್ಥಾನಕ್ಕೆ ನೂತನ ವಾರಸುದಾರ ಸಿಕ್ಕಂತಾಗಿದೆ.

ಸದ್ಯ ಶರಣ ಬಸಪ್ಪ ಅಪ್ಪಾರವರಿಗೆ 83 ವರ್ಷ ವಯಸ್ಸಾಗಿದೆ. ಗಂಡುಮಗುವಿನೆ ಜನ್ಮಕೊಟ್ಟಿರುವ 40 ವರ್ಷದ ದಾಕ್ಷಾಯಿಣಿ ಅವರು ಶರಣಬಸಪ್ಪನವರಿಗೆ ಎರಡನೇ ಪತ್ನಿಯಾಗಿದ್ದಾರೆ. ಪೀಠಾಧಿಪತಿಯವರು 83ನೇ ವಯಸ್ಸಿನಲ್ಲಿ ಸಂತಾನ ಹೊಂದಿರುವುದು ಹಲವರಿಗೆ ಆಶ್ಚರ್ಯ ವಾಗಿದೆ.

ಸಾವಿರಾರು ಕೋಟಿಯ ಒಡೆಯ ಡಾ. ಶರಣಬಸಪ್ಪ  ಹಾಗೂ ದಾಕ್ಷಾಯಿಣಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಆದ್ರೆ ಗಂಡು ಮಗು ಇರಲಿಲ್ಲ, ಇದೀಗ ಗಂಡು ಮಗು  ಜನನವಾಗಿರುವುದು ಶರಣಬಸಪ್ಪ ಅಪ್ಪಾ ಕುಟುಂಬದಲ್ಲಿ ಸಂತಸ ತಂದಿದೆ..

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ