'ನಾನು ಕನ್ನಡ ಮಾಧ್ಯಮದಲ್ಲೇ ಓದಿ ಸಿಎಂ ಆಗಿಲ್ವಾ? ಪೋಷಕರು ಇಂಗ್ಲೀಷ್ ವ್ಯಾಮೋಹ ಬಿಡಬೇಕು'

By Suvarna Web DeskFirst Published Nov 1, 2017, 10:18 PM IST
Highlights

2 ರಿಂದ 5 ಮಕ್ಕಳಿದ್ದರೂ ಕನ್ನಡ ಶಾಲೆಯನ್ನ ಮುಚ್ಚುವುದಿಲ್ಲ.  ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಹಿಂದುಳಿಯುತ್ತಾರೆ ಎಂಬ ಭಾವನೆ ಸಲ್ಲ.  ವಿಶ್ವೇಶ್ವರಯ್ಯ, ಸಿ.ಎನ್.ರಾವ್ ಕನ್ನಡದಲ್ಲೆ ಓದಿ ವಿಜ್ಞಾನಿಯಾದರು.  ನಾನು ಸಹ ಕನ್ನಡ ಮಾಧ್ಯಮದಲ್ಲೇ ಓದಿ ಸಿಎಂ ಆಗಿಲ್ವಾ? ಹೀಗಾಗಿ ಪೋಷಕರು ಇಂಗ್ಲಿಷ್​​​​ ವ್ಯಾಮೋಹ ಬಿಡಬೇಕು ಎಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.01): 2 ರಿಂದ 5 ಮಕ್ಕಳಿದ್ದರೂ ಕನ್ನಡ ಶಾಲೆಯನ್ನ ಮುಚ್ಚುವುದಿಲ್ಲ.  ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಹಿಂದುಳಿಯುತ್ತಾರೆ ಎಂಬ ಭಾವನೆ ಸಲ್ಲ.  ವಿಶ್ವೇಶ್ವರಯ್ಯ, ಸಿ.ಎನ್.ರಾವ್ ಕನ್ನಡದಲ್ಲೆ ಓದಿ ವಿಜ್ಞಾನಿಯಾದರು.  ನಾನು ಸಹ ಕನ್ನಡ ಮಾಧ್ಯಮದಲ್ಲೇ ಓದಿ ಸಿಎಂ ಆಗಿಲ್ವಾ? ಹೀಗಾಗಿ ಪೋಷಕರು ಇಂಗ್ಲಿಷ್​​​​ ವ್ಯಾಮೋಹ ಬಿಡಬೇಕು ಎಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಿಂದೆ ರಾಜ್ಯೋತ್ಸವ ಪ್ರಶಸ್ತಿಯನ್ನ 150 ಜನರಿಗೆ ನೀಡಲಾಗಿತ್ತು.  ಆದರೆ ಆ ಪ್ರಶಸ್ತಿಗೆ ಬೆಲೆ ಇರಲಿಲ್ಲ. ನಾನು ಬಂದಮೇಲೆ ಒಂದು ಆಯ್ಕೆ ಸಮಿತಿ ರಚಿಸಲಾಯಿತು.  ಆಯ್ಕೆ ಸಮಿತಿ ಯಾರನ್ನ ಸೂಚಿಸುತ್ತಾರೋ ಅವರಿಗೆ ಪ್ರಶಸ್ತಿ ಎಂದು ನಿರ್ಧರಿಸಲಾಯಿತು.  ನನ್ನ ಹತ್ತಿರ ಬಹಳಷ್ಟು ಜನರು, ಶಾಸಕರು ಪತ್ರ ಕಳುಹಿಸಿದ್ದರು.  ನಾನು ಮಾತ್ರ ಯಾರ ಹೆಸರನ್ನೂ ಶಿಫಾರಸು ಮಾಡಲಿಲ್ಲ.  ಕಲೆ ಮತ್ತು ಜ್ಞಾನದ ಮೇಲೆ ಸಮಿತಿ ನಿರ್ಧರಿಸುತ್ತೆ ಎಂದು ಹೇಳಿದ್ದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.   ನಾಡಿನ ಜನತೆಯ ಪರವಾಗಿ ನಾನು ಅವರಿಗೆ ಅಭಿನಂದಿಸುತ್ತೇನೆ.  ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಸೀಮಿತಗೊಳಿಸಬಾರದು.  ಏನಾದರೂ ಕೊಡುಗೆ ನೀಡುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು.  ಕನ್ನಡನಾಡಿನಲ್ಲಿ ಹುಟ್ಟಿದವರು, ವಾಸಿಸುವವರೆಲ್ಲಾ ಕನ್ನಡಿಗರೇ.  ಕನ್ನಡದ ಗೌರವಕ್ಕೆ ಕುತ್ತುತರುವ ರೀತಿ ಮಾಡಬಾರದು. ಕನ್ನಡ ಬರುವವರ ಜೊತೆ ಕನ್ನಡದಲ್ಲೇ ಮಾತನಾಡಿ. ಕರ್ನಾಟಕದಲ್ಲಿ ಕನ್ನಡ ಪರ ಸರ್ಕಾರ ಇರಬೇಕು. ಬ್ಯಾಂಕುಗಳು ಕನ್ನಡದಲ್ಲಿ ವ್ಯವಹರಿಸುವುದನ್ನ ರೂಡಿಸಿಕೊಳ್ಳಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 62 ಗಣ್ಯರಿಗೆ ರವೀಂದ್ರ ಕಲಾಕ್ಷೇತ್ರಗಳಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಯೊಬ್ಬ ಗಣ್ಯರಿಗೂ 1 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಬೇಕಿದ್ದ ಚಿಂತಕ ರಾಮಚಂದ್ರ ಗುಹಾ, ಗಾಯಕ ಯೇಸುದಾಸ್ ಗೈರು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ,  ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಇನ್ನು ಜಾನಪದ ವಿಭಾಗದಲ್ಲಿ ಪ್ರಶಸ್ತಿ ಪಡೆದ ಗೊರವರ ಮೈಲಾರಪ್ಪ ಪ್ರಶಸ್ತಿ ಸ್ವೀಕರಿಸಲು ಬಂದಾಗ ವೇದಿಕೆ ಮೇಲೆಯೇ ಗೊರವರ ಕುಣಿತ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

 

 

click me!