ಭಯೋತ್ಪಾದನೆಯಲ್ಲಿ ಪಾಕ್ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ

Published : Nov 24, 2017, 02:34 PM ISTUpdated : Apr 11, 2018, 01:04 PM IST
ಭಯೋತ್ಪಾದನೆಯಲ್ಲಿ ಪಾಕ್ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ

ಸಾರಾಂಶ

ಭಯೋತ್ಪಾದನೆ ಸೃಷ್ಟಿ, ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ ದೊರೆತಿದೆ.

ನವದೆಹಲಿ (ನ.24): ಭಯೋತ್ಪಾದನೆ ಸೃಷ್ಟಿ, ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ ದೊರೆತಿದೆ.

ವಿಚಾರಣೆ ವೇಳೆ ಎಲ್​'ಇಟಿ ಉಗ್ರ ಶಹಾಬುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಸುಮಾರು 200 ನಿಮಿಷಗಳ ವಿಡಿಯೋದಲ್ಲಿ ಉಗ್ರ ಹಫೀಜ್ ಸಯೀದ್ ತರಬೇತಿ ನೀಡುತ್ತಿದ್ದ ವಿವರ, ಉಗ್ರ ಶಹಾಬುದ್ದೀನ್ ಹೇಳಿಕೆಯಿಂದಾಗಿ ಬಹಿರಂಗವಾಗಿದೆ. ಭಾರತಕ್ಕೆ ಕಳುಹಿಸುವ ಉಗ್ರರಿಗೆ ಪಾಕ್ ಮಿಲಿಟರಿ ಹಾಗೂ ಐಎಸ್​ಐ ತರಬೇತಿ ನೀಡುತ್ತಿದ್ದ ವಿವರ, ನಾಲ್ವರು ಮಿಲಿಟರಿ ಅಧಿಕಾರಿಗಳಾದ ಸುಬೇದಾರ್ ಬಾಬರ್, ಕ್ಯಾ.ಮಲಿಕ್, ಕರ್ನಲ್ ಕಲ್ಯಾಣಿ, ಮೇ. ದೊಗರ್ ಹೆಸರು, ಐಎಸ್​ಐ ಮುಖ್ಯಸ್ಥರ ಜೊತೆ ಉಗ್ರ ಹಫೀಜ್ ಸಯೀದ್ ಭೇಟಿ, ಐಎಸ್​ಐನಿಂದ ಉಗ್ರ ಹಫೀಜ್ ಸಯೀದ್​ಗೆ ಮಾರ್ಗದರ್ಶನ, ಝಖೀ ಉರ್ ರೆಹಮಾನ್ ಜೊತೆಗೂ ಮಿಲಿಟರಿ-ಐಎಸ್​ಐ ಲಿಂಕ್, ಪಾಕ್ ಸರ್ಕಾರದಿಂದಲೇ ಉಗ್ರರಿಗೆ ಹಣ, ಶಸ್ತ್ರಾಸ್ತ್ರ ಪೂರೈಕೆ, ಪಾಕ್ ಪ್ರಾಯೋಜಿತ ಭಯೋತ್ಪಾದನೆ ವಿವರಗಳನ್ನ  ಉಗ್ರ ಶಹಾಬುದ್ದೀನ್ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾನೆ. ಉಗ್ರ ಹಫೀಜ್ ಸಯೀದ್ ಗೃಹಬಂಧನ ಮುಕ್ತಾಯವಾದ ಬೆನ್ನಲ್ಲೇ ಈ ವಿಡಿಯೋ ಬಹಿರಂಗವಾಗಿದೆ. ಇದರಿಂದಾಗಿ ಹಪೀಜ್ ಸಯೀದ್ ವಿರುದ್ಧ ಸಾಕ್ಷಗಳನ್ನೇ ಕೊಡದೇ ಆಟವಾಡಿದ್ದ ಪಾಕ್ ಸರ್ಕಾರದ ನರಿಬುದ್ಧಿ ಮತ್ತೊಮ್ಮೆ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ
ಕಾಶಿ ವಿಶ್ವನಾಥ ಭಕ್ತರೇ ಗಮನಿಸಿ: ಇಂದಿನಿಂದ ಹೊಸ ನಿಯಮ ಜಾರಿ! ದರ್ಶನಕ್ಕೆ ತೆರಳುವ ಮುನ್ನ ಈ ಬದಲಾವಣೆಗಳನ್ನು ತಪ್ಪದೇ ತಿಳ್ಕೊಳ್ಳಿ!