
ತಿರುವನಂತಪುರಂ (ನ.20): ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ಜೋಗುಳದ ಹಾಡು ‘ಹರಿವರಾಸನಂ'ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಹಾಡಿನ ಮೂಲ ರೂಪದಲ್ಲಿರುವ ಕೆಲ ಶಬ್ದಗಳನ್ನು ತೆಗೆದು, ತಪ್ಪಾಗಿ ಉಚ್ಚಾರಣೆಯಾಗಿರುವ ಪದಗಳನ್ನು ಸರಿಪಡಿಸಲು ನಿರ್ಧರಿಸಲಾಗಿದೆ. ‘ಹರಿವರಾಸನಂ' ಮೂಲ ಹಾಡನ್ನು 1975ರಲ್ಲಿ ತೆರೆ ಕಂಡಿದ್ದ "ಸ್ವಾಮಿ ಅಯ್ಯಪ್ಪನ್' ಚಿತ್ರಕ್ಕಾಗಿ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಹಾಡಿದ್ದರು. ಅಲ್ಲದೇ ಈ ಹಿಂದೆ ಯೇಸುದಾಸ್ ಅವರೇ ಸಾಹಿತ್ಯದಲ್ಲಿ ಬದಲಾಗಬೇಕು ಎಂದು ಸಲಹೆ ನೀಡಿದ್ದರು.
ಸದ್ಯ ಯೇಸುದಾಸ್ ಅಮೆರಿಕ ಪ್ರವಾಸದಲ್ಲಿದ್ದಾರೆ. ಮಾಸಾಂತ್ಯಕ್ಕೆ ಕೇರಳಕ್ಕೆ ಮರಳಲಿದ್ದು, ಆಗ ಹಾಡನ್ನು ಮತ್ತೂಮ್ಮೆ ರೆಕಾರ್ಡ್ ಮಾಡುವ ಬಗ್ಗೆ ಅವರ ಜತೆ ಚರ್ಚಿಸಬಹುದು ಎಂದು ಟಿಡಿಬಿಯ ಹೊಸ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.