ನೈಸ್ ಒಪ್ಪಂದ ರದ್ದು?

By Suvarna Web DeskFirst Published Nov 20, 2017, 11:13 AM IST
Highlights

ಇಂದು ನಡೆಯುತ್ತಿರುವ ಅಧಿವೇಶನದಲ್ಲಿ ನೈಸ್‌ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬೆಳಗಾವಿ (ನ.20): ಇಂದು ನಡೆಯುತ್ತಿರುವ ಅಧಿವೇಶನದಲ್ಲಿ ನೈಸ್‌ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಬಹಳಷ್ಟು ಷರತ್ತುಗಳನ್ನು ನೈಸ್ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗಿಂತ ಅನಧಿಕೃತ ಬೆಳವಣಿಗೆಗಳು ಹೆಚ್ಚಾಗಿವೆ.  ಕೆಐಎಡಿಬಿಯ ನಿರಾಕ್ಷೇಪಣಾ ಪತ್ರ ಆಧರಿಸಿ ಭೂಸ್ವಾಧೀನದಿಂದ ಕೈಬಿಡಲಾಗಿದೆ. ಇದರಿಂದ ಕೆಲವು ಪ್ರಭಾವಿಗಳು ವ್ಯಾಪಕ ವಿಸ್ತೀರ್ಣದ ಜಮೀನನ್ನು ಬೇನಾಮಿಯಾಗಿ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನೈಸ್​ ಅಕ್ರಮ ಕುರಿತು ಸದನ ಸಮಿತಿ ನೀಡಿದ್ದ 392 ಪುಟಗಳ  ಬೃಹತ್ ವರದಿಯನ್ನು ಕಾನೂನು ಸಚಿವ ಜಯಚಂದ್ರ ಮಂಡಿಸಿದ್ದರು. ಈ ಅಕ್ರಮಗಳ ಕುರಿತು ಸಿಬಿಐ- ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲಾಗಿತ್ತು. ವರದಿ ಇನ್ನೂ ಲೋಕೋಪಯೋಗಿ ಇಲಾಖೆಯಲ್ಲಿ ಧೂಳು ಹಿಡಿಯುತ್ತಿದೆ.  ವರ್ಷ ಕಳೆದರೂ ದಾಖಲೆ  ಎ.ಜಿ ಕಚೇರಿ ತಲುಪಿಲ್ಲ. ಲೋಕೋಪಯೋಗಿ ಇಲಾಖೆ ಗೊಂದಲದಲ್ಲಿದೆ.  ನೈಸ್ ಒಪ್ಪಂದ ರದ್ದು ಕುರಿತು ವಿಧಾನಸಭೆಯಲ್ಲಿಂದು ಚರ್ಚೆ  ನಡೆಯಲಿದೆ.

click me!