
ಬೆಂಗಳೂರು(ಆ.07):ರಾಜ್ಯ ಕಾಂಗ್ರೆಸ್ ಸರ್ಕಾರ ಶಾದಿಭಾಗ್ಯ ಜಾರಿಗೆ ತಂದಾಗ ಬಿಜೆಪಿ ನಾಯಕರು ವಿರೋಧಿಸಿದ್ದು. ಇದೀಗ ಮೋದಿ ಸರ್ಕಾರ ಮುಸ್ಲಿಂ ಯುವತಿಯರ ಉನ್ನತಶಿಕ್ಷಣಕ್ಕಾಗಿ ‘ಶಾದಿ ಶಗುನ್’ ಯೋಜನೆ ಜಾರಿಗೆ ತರಲು ಪ್ಲಾನ್ ಮಾಡಿಕೊಂಡಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಶಾದಿ ಭಾಗ್ಯ ಯೋಜನೆಯ ನಕಲು ಎಂದಿದೆ.
ಕರ್ನಾಟಕ ಸರ್ಕಾರದ ‘ಶಾದಿಭಾಗ್ಯ' ಹಾಗೂ ತೆಲಂಗಾಣದ ‘ಶಾದಿ ಮುಬಾರಕ್' ಯೋಜನೆಯ ರೀತಿಯೇ ಕೇಂದ್ರದ ಸರ್ಕಾರವೂ ‘ಶಾದಿ ಶಗುನ್’ ಯೋಜನೆಯನ್ನು ಜಾರಿಗೆ ತರಲು ಪ್ಲಾನ್ ಮಾಡಿಕೊಂಡಿದೆ.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಶಾದಿ ಶಗುನ್ ಯೋಜನೆ ಅನ್ವಯ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಅಲ್ಪಸಂಖ್ಯಾತ ಸಮುದಾಯದ ಹೆಣ್ಣಮಕ್ಕಳ ವಿವಾಹಕ್ಕೆ 51,000 ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪದವಿ ಮುಗಿಸಿದ ಅಲ್ಪಸಂಖ್ಯಾತ ಯುವತಿಯರಿಗೆ ಈ ಸೌಲಭ್ಯ ಸಿಗಲಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧೀನ ಸಂಸ್ಥೆ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ ಶೈಕ್ಷ ಣಿಕ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ಇನ್ನು ಶಾದಿ ಶುಗನ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಸಿದ್ದರಾಮಯ್ಯ, ಶಾದಿಭಾಗ್ಯ ಯೋಜನೆ ತಂದಾಗ ವಿರೋಧಿಸಿದ್ದ ಯಡಿಯೂರಪ್ಪ ಮತ್ತು ಶೋಭಾ ಕರದ್ಲಾಜೆ ಅವರೇ ಇದಕ್ಕೆ ಉತ್ತರಿಸಬೇಕು ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
ಇನ್ನೂ ಕೇಂದ್ರ ಸರ್ಕಾರದ ಈ ಯೋಜನೆ ನಮ್ಮ ಯೋಜನೆಯ ನಕಲು ಅಂತ ಸಚಿವೆ ಉಮಾಶ್ರೀ ಟೀಕಿಸಿದ್ದಾರೆ.
ಒಟ್ಟಿನಲ್ಲಿ ಕೇಂದ್ರದ ಶಾದಿ ಶಗುನ್ ಯೋಜನೆ ಆರಂಭಕ್ಕೂ ಮುನ್ನವೇ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಶಾದಿ ಭಾಗ್ಯ ತಂದಾಗ ರಾಜ್ಯದಲ್ಲಿ ಬಿಜೆಪಿ ವಿರೋಧಿಸಿತ್ತು. ಈಗ ಕೇಂದ್ರದ ಬಿಜೆಪಿ ಸರ್ಕಾರವೇ ಮುಸ್ಲಿಂ ಯುವತಿಯರ ‘ಶಾದಿ ಶಗುನ್’ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.