
ಪಣಜಿ: ‘ಅಗಾಧವಾದ ಪ್ರೇಮ ವ್ಯವಹಾರ’ ಇದ್ದಾಗ ಇಬ್ಬರು ಪ್ರೇಮಿಗಳು ಲೈಂಗಿಕ ಕ್ರಿಯೆ ನಡೆಸಿದ್ದಲ್ಲಿ, ಪುರುಷನನ್ನು ಅತ್ಯಾಚಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀರ್ಪು ನೀಡಿದೆ. ಈ ಮೂಲಕ ಸ್ಥಳೀಯ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ 7 ವರ್ಷ ಜೈಲು ಮತ್ತು 10,000 ದಂಡ ರದ್ದುಪಡಿಸಿದೆ.
ಕ್ಯಾಸಿನೋದಲ್ಲಿ ಬಾಣಸಿಗನಾಗಿದ್ದ ಯೋಗೇಶ್ ಪಾಲೇಕರ್, ಅದೇ ಕ್ಯಾಸಿನೋದಲ್ಲಿದ್ದ ಯುವತಿಯ ಪ್ರೇಮಿಸುತ್ತಿದ್ದ. ಆಕೆಗೆ ಮದುವೆಯ ಭರವಸೆಯನ್ನೂ ನೀಡಿದ್ದ. ಒಮ್ಮೆ ತನ್ನ ಕುಟುಂಬ ಸದಸ್ಯರಿಗೆ ಪರಿಚಯಿಸಲೆಂದು ಆಕೆಯನ್ನು ಮನೆಗೆ ಕರೆದೊಯಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಇಬ್ಬರ ನಡುವೆ ಲೈಂಗಿಕ ಸಂಬಂಧ ಏರ್ಪಟ್ಟಿತ್ತು. ಮುಂದೆಯೂ ಇದೇ ರೀತಿ ಹಲವು ಬಾರಿ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿದ್ದರು.
ಆದರೆ ಕೆಲ ತಿಂಗಳುಗಳ ಬಳಿಕ ಯುವತಿ ಕೆಳಜಾತಿಗೆ ಸೇರಿದವಳು ಎಂದು ಹೇಳಿ ಪಾಲೇಕರ್ ಮದುವೆ ಪ್ರಸ್ತಾಪ ತಳ್ಳಿಹಾಕಿದ್ದ. ಈ ಹಿನ್ನೆಲೆಯಲ್ಲಿ ಆಕೆ ಅತ್ಯಾಚಾರದ ಕೇಸು ದಾಖಲಿಸಿದ್ದಳು. ಕೆಳ ನ್ಯಾಯಾಲಯ ಈ ವಾದ ಒಪ್ಪಿ ಪಾಲೇಕರ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಯುವತಿ ಮತ್ತು ಯುವಕನ ನಡುವೆ ಪರಸ್ಪರ ಪ್ರೀತಿಯಿರುವುದರಿಂದ, ಇದೊಂದು ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆಯಾಗಿದ್ದು, ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗುವ ಉದ್ದೇಶವಿರಲಿಲ್ಲ ಎಂದ ಹೈಕೋರ್ಟ್ ಆತನನ್ನು ಖುಲಾಸೆಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.