
ಇಸ್ಲಾಮಾಬಾದ್(ಜ.06): ಪಾಕಿಸ್ತಾನ ತೆಹ್ರೀಕ್ -ಇ-ಇನ್ಸಾಫ್ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೊಸ ವರ್ಷದಂದು ಮತ್ತೊಂದು ವಿವಾಹವಾಗಿದ್ದಾರೆಂದು ವರದಿಯಾಗಿದೆ.
ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾಗ ಪರಿಚಯವಾಗಿದ್ದ ಮಹಿಳೆಯನ್ನು ಇಮ್ರಾನ್ ವರಿಸಿದ್ದಾರೆಂದು ವರದಿಯಾಗಿದ್ದು, ಜನವರಿ 1ರಂದು ಲಾಹೋರ್'ನಲ್ಲಿ ನಿಖಾ ಮಾಡಿಕೊಂಡ ಇಮ್ರಾನ್ ಖಾನ್ ಮರುದಿನ ಇಸ್ಲಾಮಾಬಾದ್'ನಲ್ಲಿರುವ ಭಯೋತ್ಪಾದಕ ನಿಗ್ರಹ ಕೋರ್ಟ್'ಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆಂದು ಹೇಳಲಾಗಿದೆ.
ಪಾಕಿಸ್ತಾನ ತೆಹ್ರೀಕ್ -ಇ-ಇನ್ಸಾಫ್ ಪಕ್ಷದ ಕೋರ್ ಕಮಿಟಿ ಸದಸ್ಯ ಮುಫ್ತಿ ಸಯೀದ್ ನೆರವೇರಿಸಿದ್ದಾರೆ ಎನ್ನಲಾಗಿದ್ದು, ಈ ಮೊದಲು ಇಮ್ರಾನ್ 2014ರ ನವೆಂಬರ್'ನಲ್ಲಿ ರೆಹಾಮ್ ಖಾನ್ ಅವರೊಂದಿಗೆ ರಹಸ್ಯವಾಗಿ ಸಯೀದ್ ನಿಖಾ ಮಾಡಿಸಿದ್ದರು, ಆ ಬಳಿಕ ಜನವರಿ 8, 2015ರಲ್ಲಿ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದರು.
ಇಮ್ರಾನ್ ಖಾನ್ ಮೊದಲು ಜಮೀಮಾ ಖಾನ್ ಅವರನ್ನು ವಿವಾಹವಾಗಿ ಜೂನ್ 22, 2004ರಲ್ಲಿ ವಿಚ್ಛೇದನ ನೀಡಿದರು, ಬಳಿಕ ರೆಹಾಮ್ ಖಾನ್ ಅವರನ್ನು ನಿಖಾ ಮಾಡಿಕೊಂಡು ಸುಮಾರು 10 ತಿಂಗಳು ಸಂಸಾರ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.