
ಉಡುಪಿ (ಆ. 24): ಇಂದು ಮತ್ತು ನಾಳೆ ನಡೆಯಬೇಕಿದ್ದ ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆಯಾಗಿದೆ.
ಮೃತರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕಾಗಿತ್ತು. ಆದರೆ ಶ್ರೀಗಳದ್ದು ಅಸಹಜ ಸಾವು ಎನ್ನುವ ಕಾರಣಕ್ಕೆ ಮುಂದೂಡಲಾಗಿತ್ತು. ಅದನ್ನು ಇಂದು ಮತ್ತು ನಾಳೆ ನಿಗದಿಯಾಗಿದ್ದ ಆರಾಧನೆ ಮತ್ತೆ ಮುಂದೂಡಲ್ಪಟ್ಟಿದೆ. ಮೂಲ ಶೀರೂರು ಮಠ ಇನ್ನೂ ಪೊಲೀಸ್ ಸುಪರ್ದಿಯಲ್ಲಿದೆ. ಸೋದೆಮಠಕ್ಕೆ ಶೀರೂರು ಮೂಲಮಠ ಹಸ್ತಾಂತರವಾಗಿಲ್ಲ. ಈ ಹಿನ್ನೆಲೆಯಲ್ಲಿ ಆರಾಧನೆಯನ್ನು ಮುಂದೂಡಿಕೆ ಮಾಡಲಾಗಿದೆ.
ಎಫ್ ಎಸ್ ಎಲ್ ವರದಿಯ ನಿರೀಕ್ಷೆಯಲ್ಲಿದ್ದಾರೆ ಪೊಲೀಸರು. ವರದಿ ಬಂದ ನಂತರವಷ್ಟೇ ಆರಾಧನೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಶಿರೂರು ಶ್ರೀಗಳದ್ದು ಅಸಹಜ ಸಾವಲ್ಲ. ಅವರಿಗೆ ವಿಷಪ್ರಾಷನವಾಗಿಲ್ಲ. ಲಿವರ್ ಸಿರೋಸಿಸ್ ಕಾಯಿಲೆಯೇ ಅವರ ಸಾವಿಗೆ ಕಾರಣ ಎಂದು ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದು ಪೊಲೀಸರ ಕೈ ಸೇರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.