
ಬೆಂಗಳೂರು[ಸೆ. 24] ಮಕ್ಕಳ ಮುದ್ದಿನ ಕಾರ್ಟೂನ್ ಡೋನಾಲ್ಡ್ ಡಕ್. ಮಿಕ್ಕಿ ಮೌಸ್ ಸ್ಥಾನವೂ ಏನು ಕಡಿಮೆ ಅಲ್ಲ. 2 ವರ್ಷ ವಯಸ್ಸಿನ ನಾಲಾ ಎಂಬ ನಾಯಿ ಡಿಸ್ನಿ ವರ್ಲ್ಡ್ ನಲ್ಲಿ ಡೊನಾಲ್ಡ್ ಡಕ್ ಕಾಣುತ್ತಿರುವಂತೆ ಅದರೆ ಮಡಿಲಿನಲ್ಲಿ ಬೆಚ್ಚಗೆ ನಿದ್ರಿಸಿದೆ.
ಟ್ವಿಟರ್ ನಲ್ಲಿ ಶೇರ್ ಆಗಿರುವ ವಿಡಿಯೋ ಮತ್ತೆ ಮತ್ತೆ ಶೇರ್ ಆಗುತ್ತಿದೆ. 80 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿರುವುದು ಅದರ ಮೇಲೆ ಇರುವ ಪ್ರೀತಿಗೆ ಸಾಕ್ಷಿ.
ಡೊನಾಲ್ಡ್ ಡಕ್ ಮಡಿಲಿನಲ್ಲಿ ಮಲಗಿದ ಶ್ವಾನವನ್ನು ಡಕ್ ಪ್ರೀತಿಯಿಂದ ತಲೆ ಸವರಿದೆ. ಶ್ವಾನ ಪ್ರಿಯರೆಂತೂ ಕಮೆಂಟ್ ಗಳೊಂದಿಗೆ ಶೇರ್ ಮಾಡಿಕೊತ್ತಿದ್ದಾರೆ.
ನಿಮ್ಮ ಮನೆಯ ಶ್ವಾನದ ಆಹಾರ ಹೀಗಿರಲಿ
ಒಂದು ಚೂರು ಹಿಸ್ಟರಿ: ನಾಲ್ಡ್ ಫಾಂಟಲೆರೋಯ್ ಡಕ್ ಅಮೆರಿಕಾದ ವ್ಯಂಗ್ಯ ಚಿತ್ರಪಾತ್ರವಾಗಿದ್ದು ದಿ ವಾಲ್ಟ್ ಡಿಸ್ನಿ ಕಂಪನಿ ಜಗತ್ತಿಗೆ ಪರಿಚಯಿಸಿತು. ಡೊನಾಲ್ಡ್ ಎಂಬ ಬಿಳಿಯ ಮಾನವ ನಿರ್ಮಿತ ಬಾತುಕೋಳಿ ಹಳದಿ -ಕಿತ್ತಳೆ ಬಣ್ಣದ ಕೊಕ್ಕು , ಕಾಲುಗಳು , ಮತ್ತು ಪಾದಗಳನ್ನು ಹೊಂದಿವೆ.
ವ್ಯಂಗ್ಯ ಚಿತ್ರಕಲೆಯಲ್ಲಿ ಇದಕ್ಕೆ ಅದರದ್ದೇ ಆದ ಉನ್ನತ ಸ್ಥಾನ. ಕಾಮಿಕ್ ಬುಕ್ ಗಳಲ್ಲಿಯೂ ಈ ಡಕ್ ಅನ್ನು ಮಕ್ಕಳು ಪ್ರೀತಿಸುತ್ತಾರೆ. ಅನೇಕ ಕತೆ, ಸಿನಿಮಾ ಮತ್ತು ನಾಟಕಗಳಲ್ಲಿಯೂ ಡೊನಾಲ್ಡ್ ಡಕ್ ಬಳಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.