ಹೋಟೆಲ್ ಗಳಲ್ಲಿ ಸೇವಾ ಶುಲ್ಕ ಕೊಡುವುದು ಕಡ್ಡಾಯವಲ್ಲ, ನಿಮ್ಮ ವಿವೇಚನೆಗೆ ಬಿಟ್ಟಿದ್ದು

Published : Jan 02, 2017, 12:11 PM ISTUpdated : Apr 11, 2018, 01:09 PM IST
ಹೋಟೆಲ್ ಗಳಲ್ಲಿ ಸೇವಾ ಶುಲ್ಕ ಕೊಡುವುದು ಕಡ್ಡಾಯವಲ್ಲ, ನಿಮ್ಮ ವಿವೇಚನೆಗೆ ಬಿಟ್ಟಿದ್ದು

ಸಾರಾಂಶ

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿಂದದ್ದು ಸಂತೃಪ್ತಿಯಾಗಲಿ ಬಿಡಲಿ ಆದರೆ ಸರ್ವಿಸ್ ಚಾರ್ಜಸ್ ಅಂತ ಹೋಟೆಲ್, ರೆಸ್ಟೋರೆಂಟ್ ನವರು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದಕ್ಕೆ ಕಡಿವಾಣ ಬಿದ್ದಿದೆ.  ಸರ್ವಿಸ್ ಚಾರ್ಜನ್ನು ಕೊಡುವುದು ಕಡ್ಡಾಯವಲ್ಲ, ಕೊಡುವುದು ಬಿಡುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ.

ನವದೆಹಲಿ (ಡಿ. 02): ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿಂದದ್ದು ಸಂತೃಪ್ತಿಯಾಗಲಿ ಬಿಡಲಿ ಆದರೆ ಸೇವಾ ಶುಲ್ಕ (ಸರ್ವಿಸ್ ಚಾರ್ಜಸ್) ಅಂತ ಹೋಟೆಲ್, ರೆಸ್ಟೋರೆಂಟ್ ನವರು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದಕ್ಕೆ ಕಡಿವಾಣ ಬಿದ್ದಿದೆ.  ಸರ್ವಿಸ್ ಚಾರ್ಜನ್ನು ಕೊಡುವುದು ಕಡ್ಡಾಯವಲ್ಲ, ಕೊಡುವುದು ಬಿಡುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ.

ಟಿಪ್ಸನ್ನು ಹೊರತುಪಡಿಸಿ ಶೇ. 5 ರಿಂದ 20 ರಷ್ಟು ಸೇವಾ ಶುಲ್ಕ ಬಿಲ್ ಗೆ ಸೇರುತ್ತಿತ್ತು. ಈ ರೀತಿ ಗ್ರಾಹಕರಿಂದ ಹಣ ಕೀಳುವುದು ನ್ಯಾಯೋಚಿತ ವ್ಯಾಪಾರವಲ್ಲ.  ಹಾಗಾಗಿ ಇನ್ಮುಂದೆ ಸೇವಾ ಶುಲ್ಕ ಕೊಡುವುದು ಕಡ್ಡಾಯವಲ್ಲ. ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಸರ್ಕಾರ ಹೇಳಿದೆ.

ಈ ಸುತ್ತೋಲೆಯನ್ನು ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಸೂಕ್ತವಾದ ಸ್ಥಳದಲ್ಲಿ ಗ್ರಾಹಕರಿಗೆ ಕಾಣುವಂತೆ ಹಾಕಬೇಕು. ಸರ್ವಿಸ್ ಚಾರ್ಜಸ್ ಕೊಡುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.  ಒಂದುವೇಳೆ ಗ್ರಾಹಕರು ಸೇವೆಯಿಂದ ಅಸಂತೃಪ್ತಿಗೊಂಡಿದ್ದರೆ ಕೊಡುವ ಅಗತ್ಯವಿಲ್ಲ ಎಂದು ಗ್ರಾಹಕ ವ್ಯವಹಾರ ಇಲಾಖೆ ಹೇಳಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?
ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ