ಗಣರಾಜ್ಯೋತ್ಸವ ದಿನದಂದು ಅಸ್ಸಾಮ್'ನಲ್ಲಿ ಸರಣಿ ಬಾಂಬ್ ಸ್ಫೋಟ

By Suvarna Web DeskFirst Published Jan 26, 2017, 7:46 AM IST
Highlights

ತಮ್ಮ ಇರುವಿಕೆಯನ್ನು ತೋರಿಸಲು ಉಗ್ರರು ಸಾಂಕೇತಿಕವಾಗಿ ಬಾಂಬ್ ಸ್ಫೋಟಿಸಿರುವ ಸಾಧ್ಯತೆ ಇದೆ ಎಂಬುದು ಪೊಲೀಸರ ಅನುಮಾನ.

ಗುವಾಹಟಿ(ಜ. 26): ಗಣರಾಜ್ಯೋತ್ಸವ ದಿನದಂದು ಅಸ್ಸಾಮ್'ನ ಮೂರು ಜಿಲ್ಲೆಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಅದೃಷ್ಟಕ್ಕೆ ಯಾವುದೇ ಜೀವ ಹಾನಿಯಾಗಿಲ್ಲ, ಗಾಯವೂ ಆಗಿಲ್ಲ. ಅಸ್ಸಾಮ್'ನ ಪೂರ್ವಭಾಗದಲ್ಲಿರುವ ದಿಬ್ರುಗಡ್, ತಿನ್ಸುಕಿಯಾ ಮತ್ತು ಚರಾಯಿದೇವೋ ಜಿಲ್ಲೆಗಳಲ್ಲಿ ಏಳು ಕಡೆ ಬಾಂಬ್'ಗಳನ್ನು ಸ್ಫೋಟಿಸಲಾಗಿದೆ. ಉದ್ದೇಶಪೂರ್ವಕವಾಗಿ ನಿರ್ಜನ ಪ್ರದೇಶಗಳಲ್ಲಿ ಬಾಂಬ್'ಗಳನ್ನಿಡಲಾಗಿತ್ತು. ಹೀಗಾಗಿ, ಯಾವುದೇ ಹಾನಿಯಾಗಿಲ್ಲ. ಉಲ್ಫಾ ಉಗ್ರರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬಾರದೆಂದು ಉಗ್ರ ಸಂಘಟನೆಗಳು ಕರೆಕೊಟ್ಟಿದ್ದವು. ತಮ್ಮ ಇರುವಿಕೆಯನ್ನು ತೋರಿಸಲು ಉಗ್ರರು ಸಾಂಕೇತಿಕವಾಗಿ ಬಾಂಬ್ ಸ್ಫೋಟಿಸಿರುವ ಸಾಧ್ಯತೆ ಇದೆ ಎಂಬುದು ಪೊಲೀಸರ ಅನುಮಾನ.

(ಸುದ್ದಿಯಲ್ಲಿ ಬಳಸಿರುವ ಫೋಟೋ ಕೇವಲ ಪ್ರಾತಿನಿಧಿಕ ಮಾತ್ರ)

click me!