ದೇಶಾದ್ಯಂತ 68ನೇ ಗಣರಾಜ್ಯ ಸಂಭ್ರಮ: ರಾಜಪಥ್'ನಲ್ಲಿ ದೇಶದ ಸೇನಾಶಕ್ತಿಯ ಅನಾವರಣ

By Suvarna Web DeskFirst Published Jan 26, 2017, 6:44 AM IST
Highlights

ದೇಶಾದ್ಯಂತ 68ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಅಬುದಾಬಿ ಯುವರಾಜ ಮುಖ್ಯ ಅತಿಥಿಯಾಗಿದ್ದರು.

ನವದೆಹಲಿ(ಜ.23): ದೇಶಾದ್ಯಂತ 68ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಅಬುದಾಬಿ ಯುವರಾಜ ಮುಖ್ಯ ಅತಿಥಿಯಾಗಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೊಂದಿಗೆ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಹಾಗೂ ಅಬುದಾಬಿ ಯುವರಾಜ ಶೇಕ್ ಮಹಮ್ಮದ್ ಆಸೀನರಾದರು. ಈ ವೇಳೆ ಹವಾಲ್ದಾರ್ ಹಂಗ್'ಪನ್ ದಾದಾ ಪತ್ನಿಗೆ ಈ ವರ್ಷದ ಅಶೋಕ ಚಕ್ರ ಗೌರವವನ್ನು ನೀಡಲಾಯಿತು. ಹಂಗ್'ಪನ್ ದಾದಾ ಅರುಣಾಚಲ ಪ್ರದೇಶ ಪ್ರದೇಶದ ಗಡಿಯಲ್ಲಿ ಮೂವರು ಶಸ್ತ್ರಾಸ್ತ್ರ ಉಗ್ರರನ್ನು ಹೊಡೆದುರುಳಿಸಿದ್ದರು. ಆದರೆ ನಾಲ್ಕನೇ ಉಗ್ರನ ಗುಂಡೇಟಿಗೆ ಪ್ರಾಣವನ್ನು ತ್ಯಜಿಸಿದ್ದರು. ತಮ್ಮ ಬಲಿದಾನದಿಂದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದರು.

ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೆಂಪುಕೋಟೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ವಿವಿಧ ಪರೇಡ್ ಸಾಹಸ ಪ್ರದರ್ಶನ ಕೂಡಾ ನಡೆಯಿತು. ಪಥಸಂಚಲನ, ಸ್ತಬ್ಧಚಿತ್ರ ಸೇರಿದಂತೆ ಸಾಹಸ ಪ್ರದರ್ಶನ ಒಂದೂವರೆ ಗಂಟೆಯ ಕಾಲ ನಡೆದಿದ್ದು, ಆಕರ್ಷಕ ಏರ್ ಶೋದೊಂದಿಗೆ ಈ ಸಡಗರ ಮುಕ್ತಾಯವಾಯಿತು.

ಇದೇ ಮೊದಲ ಬಾರಿಗೆ ಈ ಪಥಸಂಚಲನದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿಗಳ ತಂಡ ಭಾಗವಹಿಸಿ ಆಕರ್ಷಕ ಕವಾಯತ್ತನ್ನು ಪ್ರದರ್ಶಿಸಿ ರಾಷ್ಟ್ರಪತಿಗಳ ಗೌರವ ಸ್ವೀಕರಿಸಿದರು.    

click me!