ಸ್ವತಂತ್ರ ಲಿಂಗಾಯತ ಧರ್ಮಕ್ಕೂ ಚುನಾವಣೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

By Suvarna Web DeskFirst Published Dec 24, 2017, 1:08 PM IST
Highlights
  • ಬಂದಿದ್ದ ಎಲ್ಲ 5 ಅರ್ಜಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಕಳಿಸಿದ್ದೇನೆ, ಉಳಿದದ್ದು ಆಯೋಗಕ್ಕೆ ಬಿಟ್ಟ ವಿಷಯ
  • ಮಹದಾಯಿ ವಿಚಾರವಾಗಿ ಬಿಜೆಪಿಯು ನಾಟಕ ಮಾಡುತ್ತಿದೆ. ಪರ್ರಿಕ್ಕರ್ ಮತ್ತು ಯಡಿಯೂರಪ್ಪ ಸೇರಿ ಹೈಡ್ರಾಮಾ ನಡೆಸಿದ್ದಾರೆ

ಹಾವೇರಿ: ಲಿಂಗಾಯತ ಸ್ವತಂತ್ರ ಧರ್ಮ ವಿಷಯಕ್ಕೂ ಚುನಾವಣೆಗೂ ಸಂಬಂಧವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ,  ಸಿದ್ದರಾಮಯ್ಯ ಹೇಳಿಕೆ ಲಿಂಗಾಯತ ಸ್ವತಂತ್ರ ಧರ್ಮ ವಿಷಯಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಬಂದಿದ್ದ ಎಲ್ಲ 5 ಅರ್ಜಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಕಳಿಸಿದ್ದೇನೆ. ಉಳಿದದ್ದು ಆಯೋಗಕ್ಕೆ ಬಿಟ್ಟ ವಿಷಯ, ಎಂದು ಹೇಳಿದ್ದಾರೆ.

Latest Videos

ಸರ್ಕಾರದ ಕೆಲಸವನ್ನು ನಾವು ಮಾಡಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ. ಸದಾಶಿವ ಆಯೋಗದ ವರದಿ ಅನುಷ್ಠಾನ ಕುರಿತು ಡಿ.31ಕ್ಕೆ ಸಭೆ ಕರೆಯಲಾಗಿದ್ದು, ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಹದಾಯಿ ವಿಚಾರವಾಗಿ ಬಿಜೆಪಿಯು ನಾಟಕ ಮಾಡುತ್ತಿದೆ. ಪರ್ರಿಕ್ಕರ್ ಮತ್ತು ಯಡಿಯೂರಪ್ಪ ಸೇರಿ ಹೈಡ್ರಾಮಾ ನಡೆಸಿದ್ದಾರೆ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಕತ್ತಿದ್ದರೆ ಬಂಧಿಸಲಿ ಎಂಬ ಶೋಭಾ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ಬಂಧಿಸುವುದಿಲ್ಲ. ಅದನ್ನು ಪೊಲೀಸರು ಮಾಡುತ್ತಾರೆ. ಕಾನೂನು ಪ್ರಕಾರ ತಪ್ಪಿತಸ್ಥರನ್ನು ಬಂಧಿಸುತ್ತಾರೆ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.

 

click me!