ಭಾರತ ಪಾಕ್ ಯುದ್ಧ ಭೀತಿ: ಷೇರು ಮಾರುಕಟ್ಟೆ ಕುಸಿತ

By Internet DeskFirst Published Sep 30, 2016, 5:06 AM IST
Highlights

ಮುಂಬೈ(ಸೆ.30): ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಪರಿಸ್ಥಿತಿಗೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಏರುಪೇರಾಗಿದೆ. ಇದರ ಪರಿಣಾಮ ವಿವಿಧ ಕಂಪೆನಿಗಳ ಬಂಡವಾಳದಲ್ಲಿ 2.40 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

ಉಗ್ರರ ವಿರುದ್ಧ ನಡೆದ ಸರ್ಜಿಕಲ್ ಅಟ್ಯಾಕ್  ಕುರಿತು ಸರ್ಕಾರ  ಘೋಷಣೆ ಮಾಡುತ್ತಿದ್ದಂತೆಯೇ ಸೆನ್ಸೆಕ್ಸ್'ನಲ್ಲಿ 550 ಅಂಶ ಕುಸಿತ ಕಂಡಿದೆ. ಇನ್ನು ನಿಫ್ಟಿಯಲ್ಲೂ ಸಹ 153 ಅಂಶ ಕುಸಿತ ಕಂಡಿದ್ದು, ನಿಫ್ಟಿ ಸೂಚ್ಯಂಕದಲ್ಲಿ ಒಳಗೊಂಡಿರುವ 46 ಷೇರುಗಳು ನಷ್ಟ ಅನುಭವಿಸಿದೆ. ಇದರಲ್ಲಿ ಬಿಎಚ್ ಇಎಲ್ ಕಂಪೆನಿಯು ಶೇ 7.51ರಷ್ಟು, ಅದಾನಿ ಶೇ 4.52, ಹಿಂಡಾಲ್ಕೊ ಶೇ 4.37, ಅರೊಬಿಂದೊ ಫಾರ್ಮಾ ಶೇ 4.30, ಬ್ಯಾಂಕ್ ಆಫ್ ಬರೋಡಾ ಶೇ 3.98ರಷ್ಟು ಕುಸಿತ ಕಂಡಿದೆ. ಭಾರ್ತಿ ಇನ್ ಫ್ರಾಟೆಲ್, ಟಿಸಿಎಸ್, ಐಟಿಸಿ, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಒಎನ್ ಜಿಸಿ ಅಲ್ಪ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ.

ಭಾರತ-ಪಾಕಿಸ್ತಾನ ಮಧ್ಯದ ಪರಿಸ್ಥಿತಿ ಬಿಗಡಾಯಿಸಿರುವುದರ ಜತೆಗೆ ಲಾಭದ ನಗದೀಕರಣ (ಪ್ರಾಫಿಟ್ ಬುಕಿಂಗ್) ಕೂಡ ಮಾರುಕಟ್ಟೆ ಮೇಲೆ ಪ್ರಭಾವ ಬೀರಿತು ಎಂದು ಮಾರುಕಟ್ಟೆ ತಜ್ಞರಾದ ಜಿ.ಚೊಕ್ಕಲಿಂಗಂ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೆಕ್ಟರ್ ಗಳ ಪ್ರಕಾರ ಹೇಳುವುದಾದರೆ ಬಿಎಸ್ ಇ ರಿಯಾಲ್ಟಿ ಇಂಡೆಕ್ಸ್, ಪವರ್ ಹಾಗೂ ಹೆಲ್ತ್ ಕೇರ್ ಇಂಡೆಕ್ಸ್ ಗಳು ಕುಸಿತ ಕಂಡಿವೆ. ಇದೆ ಸಂದರ್ಭದಲ್ಲಿ ವಿಶ್ವದ ಇತರೆ ಮಾರುಕಟ್ಟೆಗಳಾದ ಯುರೋಪ್, ಅಮೆರಿಕಾ, ಹ್ಯಾಂಗ್ ಸೆಂಗ್, ನಿಕಿ, ಶಾಂಘೈ ಮಾರುಕಟ್ಟೆಗಳು ಏರಿಕೆ ದಾಖಲಿಸಿವೆ.

click me!