ಕರ್ನಾಟಕಕ್ಕೆ 'ಕಾವೇರಿ ನಿರ್ವಹಣಾ ಮಂಡಳಿ' ಎಂಬ ಮರಣ ಶಾಸನ: ಮಂಡಳಿ ರಚನೆಯಾದರೆ ಏನೇನು ಆಗುತ್ತೆ ಗೊತ್ತಾ?

Published : Sep 30, 2016, 04:51 AM ISTUpdated : Apr 11, 2018, 12:34 PM IST
ಕರ್ನಾಟಕಕ್ಕೆ  'ಕಾವೇರಿ ನಿರ್ವಹಣಾ ಮಂಡಳಿ' ಎಂಬ ಮರಣ ಶಾಸನ: ಮಂಡಳಿ ರಚನೆಯಾದರೆ ಏನೇನು ಆಗುತ್ತೆ ಗೊತ್ತಾ?

ಸಾರಾಂಶ

ಬೆಂಗಳೂರು(ಸೆ.30): ಸುಪ್ರೀಂಕೋರ್ಟ್'ನಲ್ಲಿ ಕಾವೇರಿ ವಿಚಾರವಾಗಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗಿದ್ದು, ತಮಿಳುನಾಡಿನ ವಾದಕ್ಕೆ ಕೊನೆಗೂ ಮನ್ನಣೆ ಸಿಕ್ಕಿದೆ. ಇವೆಲ್ಲದರೊಂದಿಗೆ ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ಕೂಡಾ ಈ ವಾದದಿಂದ ಹಿಂದೆ ಸರಿದಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ಟೋಬರ್ 4 ರ ಒಳಗೆ​ ಕಾವೇರಿ ನಿರ್ವಾಹಣಾ ಮಂಡಳಿ ರಚನೆ ಮಾಡಬೇಕೆಂದೂ ಆದೇಶಿಸಿದೆ. ಆದರೆ ಈ ಮಂಡಳಿ ರಚನೆ ಕರ್ನಾಟಕಕ್ಕೆ ಮರಣ ಶಾಸನವಿದ್ದಂತೆ. ಈ ಮಂಡಳಿ ಅಸ್ತಿತ್ವಕ್ಕೆ ಬಂದರೆ ಕರ್ನಾಟಕಕ್ಕೆ ಕಂಟಕ ತಪ್ಪಿದ್ದಲ್ಲ, ಅಷ್ಟಕ್ಕೂ ಇದರಿಂದ ಕರ್ನಾಟಕ ಎದುರಿಸಬೇಕಾದ ಸಮಸ್ಯೆಗಳೇನು? ಇಲ್ಲಿದೆ ವಿವರ

-ಕಾವೇರಿ ನಿರ್ವಹಣಾ ಮಂಡಳಿ ಆಸ್ತಿತ್ವಕ್ಕೆ ಬಂದರೆ ಕರ್ನಾಟಕಕ್ಕೆ ದೊಡ್ಡ ಆಪತ್ತು ಕಾದಿದೆ. ಕಾವೇರಿ ನದಿ ಮೇಲಿನ ಹಕ್ಕನ್ನು ಕರ್ನಾಟಕ ಸಂಪೂರ್ಣ ಕಳೆದುಕೊಳ್ಳುತ್ತದೆ.

-ಕಾವೇರಿ ಮೇಲಿನ ಹಕ್ಕು ಸ್ವಾಮ್ಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುತ್ತದೆ.

-ಕಾವೇರಿ ಕೊಳ್ಳದ ಜಲಾಶಯಗಳ ಮೇಳೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿಡಿತವಿರುತ್ತದೆ.

-ಕೇಂದ್ರ ನೀರಾವರಿ ಆಯೋಗದ (CWC) ನಿಯಂತ್ರಣಕ್ಕೆ ಹೋಗುತ್ತದೆ.

-ನೀರು ಹರಿಸುವ ತೀರ್ಮಾನವನ್ನು ನಿರ್ವಹಣಾ ಮಂಡಳಿಯೇ ಕೈಗೊಳ್ಳುತ್ತೆದೆ.

-ಈ ಮಂಡಳಿಯ ಅಧ್ಯಕ್ಷರು, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

-ರಾಜ್ಯಗಳ ಪ್ರತಿನಿಧಿಗಳಿದ್ದರೂ ತಮಿಳುನಾಡಿನದ್ದೇ ಪ್ರಾಬಲ್ಯವಿರುತ್ತದೆ.

-ನ್ಯಾಯಾಧೀಕರಣದ ಸೂತ್ರದಂತೆ ನೀರು ಹಂಚಿಕೆಯಾದರೆ ಕರ್ನಾಟಕಕ್ಕೆ ಆಪತ್ತು ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಗಳೂ ಇವೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ತಮಿಳುನಾಡಿಗೆ ಹೆಚ್ಚಿನ ಬಲ ಬರುತ್ತದೆ.

-ಇದೇ ಕಾರಣಕ್ಕೆ ಜಯಲಲಿತಾ ಕಾವೇರಿ ನಿರ್ವಹಣಾ ಮಂಡಳಿಗೆ ಪಟ್ಟು ಹಿಡಿದಿದ್ದರು ಹಾಗೂ ಮೋದಿ ಪ್ರಧಾನಿಯಾದ ಬಳಿಕ ಜಯಲಲಿತಾ 2 ಬಾರಿ ಈ ಮಂಡಳಿ ರಚನೆಗೆ ಮನವಿ ಸಲ್ಲಿಸಿದ್ದರು.  ಸುಪ್ರೀಂಕೋರ್ಟ್​ನಲ್ಲೂ ಈ ಕುರಿತು ಹಲವು ಬಾರಿ ವಿಚಾರಣೆ ನಡೆದಿತ್ತು

ಕೊನೆಗೂ ಈಗ ತಮಿಳುನಾಡಿನ ಪಟ್ಟಿಗೆ ಮಣಿದ ಸುಪ್ರೀಂಕೋರ್ಟ್​ ನ್ಯಾಯಾಧೀಕರಣವೂ ಅಂತಿಮ ತೀರ್ಪಿನಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಸೂಚಿಸಿದೆ. ಆದರೆ ಕರ್ನಾಟಕ ಮಾತ್ರ ಆರಂಭದಿಂದಲೂ ಮಂಡಳಿ ರಚನೆಗೆ ವಿರೋಧಿಸುತ್ತಲೇ ಬಂದಿತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!
2026 ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ, ಈ ರಾಶಿಗೆ ಪ್ರತಿ ಹೆಜ್ಜೆಯಲ್ಲೂ ಅಡೆತಡೆ