
ಜಾರ್ಖಂಡ್(ನ.26): ಬ್ಯಾಂಕ್'ನ ಸೀನಿಯರ್ ಮ್ಯಾನೆಜರ್ ಒಬ್ಬರ ಹೆಂಡತಿ ಹಾಗೂ ಮಗನ ಕೊಲೆ ಪ್ರಕರಣ ಹಿಂದಿನ ರಹಸ್ಯ ಬಯಲಾಗಿದೆ. ಕಳೆದ ವಾರ ನಡೆದಿದ್ದ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಬೇರೆ ಯಾರೂ ಆಗಿರದೆ ಖುದ್ದು ಮ್ಯಾನೇಜರ್ ಸಾಹೇಬ್ರೇ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳೆದ ಬುಧವಾರದಂದು ಇಂಡಿಯನ್ ಓವರ್'ಸೀಜ್ ಬ್ಯಾಂಕ್'ನ ಸೀನಿಯರ್ ಮ್ಯಾನೇಜರ್ ಶಶಿ ಪ್ರಸಾದ್ ಪತ್ನಿ ಮಂಜು ದೇವಿ ಹಾಗೂ ಇವರ ಏಕೈಕ ಪುತ್ರ ಧ್ವಿಜ್'ನ್ನು ದುಷ್ಕರ್ಮಿಗ:ಳು ಭೀಕರವಾಗಿ ಕೊಲೆಗೈದಿದ್ದರು. ಈ ಕುರಿತಾಗಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಪತಿ ಶಶಿ ಪ್ರಸಾದ್ ಮೇಲೆ ಅನುಮಾನವಿತ್ತು. ಇನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಆರೋಪಿಗಳಾದ ಮೋಹನ್ ಶರ್ಮಾ ಹಗೂ ಮುಕೇಶ್ ಶರ್ಮಾ ನಿಜ ಬಾಯ್ಬಿಟ್ಟಿದ್ದು ಶಶಿ ಪ್ರಸಾದ್ ತಮಗೆ ಈ ಕೊಲೆ ಮಾಡಲು ಸುಪಾರಿ ನೀಡಿದ್ದ ಎಂದು ತಿಳಿಸಿದ್ದಾರೆ.
47 ವರ್ಷದ ಈ ಮ್ಯಾನೇಜರ್'ಗೆ ಗುಜರಾತ್'ನಲ್ಲಿರುವ ತನ್ನ ದೊಡ್ಡಮ್ಮನ ಮಗಳು 17 ವರ್ಷದ ತಂಗಿಯೊಂದಿಗೆ ಪ್ರೇಮ ಸಂಬಂಧವಿತ್ತು. ಒಂದೂವರೆ ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದ, ಮದುವೆಯಾಗಬಯಸಿದ್ದರು. ಆದರೆ ಈ ಮದುವೆಗೆ ತೊಡಕಾಗಿದ್ದು ಆತನ ಹೆಂಡತಿ ಹಾಗೂ ಮಗ. ಹೀಗಾಗಿ ಕಳೆದ 2 ತಿಂಗಳ ಹಿಂದೆಯೇ ಇವರಿಬ್ಬರನ್ನು ಕೊಲೆಗೈಯ್ಯಲು ಸ್ಕೆಚ್ ಹಾಕಿದ್ದ ಶಶಿ ಕೊಲೆ ಮಾಡಲು ಸುಪಾರಿ ನೀಡಿದ್ದ.
ಇನ್ನು ಮೃತ ಬಾಲಕನನ್ನು ಬ್ಯಾಂಕ್ ಮ್ಯಾನೇಜರ್ ಮಗ ಅಲ್ಲ, ದತ್ತು ಪಡೆದ ಮಗ ಎಂಬ ಮಾತುಗಳೂ ಕೇಳಿ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.