
ಬೆಂಗಳೂರು [ಜು.1] : ಕೆಲವರು ಸೆಲ್ಫಿ ಹುಚ್ಚಿಗೆ ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ. ಎಲ್ಲೋ ಅಪರೂಪಕ್ಕೊಮ್ಮೆ ಇಂಥ ಘಟನೆ ನಡೆಯುತ್ತದೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು.
ಕಳೆದ ಒಂದು ದಶಕದಲ್ಲಿ ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ ಶಾರ್ಕ್ ದಾಳಿಗೆ ಬಲಿಯಾದವರ ಸಂಖ್ಯೆಯ ಐದು ಪಟ್ಟು ಹೆಚ್ಚಿದೆಯಂತೆ. 2011ರ ಅಕ್ಟೋಬರ್‌ನಿಂದ 2017ರ ಡಿಸೆಂಬರ್ ವರೆಗೆ ವಿಶ್ವದಾದ್ಯಂತ 259 ಜನರು ಸೆಲ್ಫಿಗಾಗಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ 159 ಜನ ಸಾವನ್ನಪ್ಪಿದ್ದಾರೆ.
ಇದೇ ಅವಧಿಯಲ್ಲಿ ಶಾರ್ಕ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಕೇವಲ 50 ಎಂದು ಇಂಡಿಯಾಸ್ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಆ್ಯಂಡ್ ಪ್ರೈಮರಿ ಕೇರ್‌ಯ ಅಧ್ಯಯನ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.