
ಯಡಿಯೂರಪ್ಪನವರ ಕಾರಣದಿಂದ ಹಾವು ಮುಂಗುಸಿಯಂತೆ ಆಗಿದ್ದ ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡರು ಈಗ ಮತ್ತೆ ಕ್ಲೋಸ್ ಆಗಿದ್ದಾರೆ. ಉಡುಪಿಗೆ ಶೋಭಾ ನಿಲ್ಲುವುದಿಲ್ಲ ಎಂದು ಹೇಳುತ್ತಾ ಖುಷಿಯಾಗಿರುವ ಸದಾನಂದಗೌಡರು ನಿಧಾನವಾಗಿ ಅಲ್ಲಿಗೆ ಹೋಗಿ ತಾನೇ ನಿಲ್ಲಲು ಪ್ರಯತ್ನ ಆರಂಭಿಸುತ್ತಿದ್ದಾರೆ.
ಉಡುಪಿಯವರು ಯಾರಾದರೂ ಬಂದರೆ ಪಕ್ಕಕ್ಕೆ ಕರೆದುಕೊಂಡು ಹೋಗುವ ಸದಾನಂದಗೌಡರು ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಬೇಕಾದರೆ ದುಡ್ಡು ಬೇಕು, ನಾನು ಉಡುಪಿಗೆ ಬಂದು ನಿಂತರೆ ಹೇಗೆ? ಸ್ವಲ್ಪ ನಿಮ್ಮದೇ ಜನರಲ್ಲಿ ಸರ್ವೇ ಮಾಡಿ ಹೇಳಿ ಎನ್ನುತ್ತಾರೆ. ಇನ್ನು ರಾಜ್ಯ ಬಿಜೆಪಿಯವರು ಸಿಕ್ಕಿದರೆ ಶೋಭಕ್ಕನನ್ನು ಹಾಡಿ ಹೊಗಳುವ ಸದಾನಂದಗೌಡರು ಅವರಿಗೆ ಯಶವಂತಪುರಕ್ಕೆ ಟಿಕೆಟ್ ಕೊಟ್ಟಿದ್ದರೆ ಗೆದ್ದುಬಿಡುತ್ತಿದ್ದರು, ಅವರು ಡೈನಾಮಿಕ್ ಮಾರಾಯ್ರೆ ಎನ್ನುತ್ತಾರೆ. ಹಿಂದೊಮ್ಮೆ ಉಡುಪಿಯಿಂದಾಗಿಯೇ ಜಗಳ ಶುರುಹಚ್ಚಿಕೊಂಡಿದ್ದ ಇಬ್ಬರು ಈಗ ಉಡುಪಿಗೋಸ್ಕರವೇ ಒಂದಾಗುತ್ತಿದ್ದಾರೆ.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.