ಪುರುಷತ್ವ ಅನುಮಾನಿಸಿದ ಪತ್ನಿ: ಪತಿ ಮಾಡಿದ್ದೇನು?

Published : Jul 31, 2018, 03:51 PM IST
ಪುರುಷತ್ವ ಅನುಮಾನಿಸಿದ ಪತ್ನಿ: ಪತಿ ಮಾಡಿದ್ದೇನು?

ಸಾರಾಂಶ

ಪುರುಷತ್ವ ಅನುಮಾನಿಸಿದ ಪತ್ನಿ ಕುಟುಂಬ ಪತಿಯಿಂದ ಮಹಿಳೆ ಜೊತೆ ಕಾಮದಾಟ ವಿಡಿಯೋ ತುಣುಕನ್ನು ವಾಟ್ಸಪ್ ಮಾಡಿದ ಭೂಪ ವಿಡಿಯೋ ಕಳುಹಿಸಿದ ಪಾಪಿ ಪತಿ ಅರೆಸ್ಟ್

ಹೈದಾರಾಬಾದ್(ಜು.31): ಪತಿ ನಪುಂಸಕ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಸಿದ್ದ ಪತ್ನಿಗೆ ಪಾಠ ಕಲಿಸಲು ಈ ಭೂಪ ಮಾಡಿದ್ದೇನು ಗೊತ್ತಾ?. ಪತಿಯೋರ್ವ ತನ್ನ ಪುರುಷತ್ವ ಸಾಬೀತುಪಡಿಸಲು ಬೇರೊಂದು ಹೆಣ್ಣಿನ ಜೊತೆಗಿರುವ ವಿಡಿಯೋ ಮಾಡಿ ಅದನ್ನು ತನ್ನ ಮಾವ ಮತ್ತು ಪತ್ನಿಗೆ ಕಳಹಿಸಿದ  ಘಟನೆ ಚೆನ್ನೈನಲ್ಲಿ ನಡೆದಿದೆ.

ಹೆಂಡತಿ ತನ್ನ ಪುರುಷತ್ವ ಅನುಮಾನಿಸಿ ಹೇಳಿಕೆ ನೀಡಿದ್ದಕ್ಕೆ ಸಿಟ್ಟಾದ ಗಂಡ, ಮತ್ತೊಬ್ಬ ಮಹಿಳೆಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋದ ತುಣುಕನ್ನು ಪತ್ನಿಯ ತಂದೆ-ತಾಯಿಗೆ ಕಳಿಸಿದ್ದಾನೆ. ಹೈದರಾಬಾದ್ ಮೂಲದ ವಿಭಾವಾಸು ಎಂಬ ವ್ಯಕ್ತಿಯೇ ಬೇರೊಂದು ಹೆಣ್ಣಿನ ಜೊತೆ ಕಾಮದಾಟದಲ್ಲಿ ನಿರತವಾಗಿರುವ ವಿಡಿಯೋವನ್ನು ಮಾವ ಅತ್ತೆಗೆ ಕಳುಹಿಸಿದ ಭೂಪ.

ವಿಭಾವಾಸು, ಅನುಷಾ ಎಂಬಾಕೆಯನ್ನು 2016ರಲ್ಲಿ ವಿವಾಹವಾಗಿದ್ದ. ಈ ದಂಪತಿ ಕೇವಲ 15 ದಿನ ಮಾತ್ರ ಒಟ್ಟಿಗೆ ಇದ್ದರು. ನಂತರ ಅನುಷಾ ತಂದೆಯ ಮನೆಗೆ ವಾಪಸ್​ ಬಂದಿದ್ದಳು. ತನ್ನ ಗಂಡ ಪುರುಷನೇ ಅಲ್ಲ. ನನಗೆ ಡಿವೋರ್ಸ್​ ಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. 

ಆದರೆ, ಅನುಷಾ ಹೇಳಿಕೆಯಿಂದ ವ್ಯಘ್ರನಾದ ವಿಭಾವಾಸು , ಬೇರೊಬ್ಬ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋದ 5 ನಿಮಿಷದ ತುಣುಕನ್ನು ಅನುಷಾ ತಂದೆ, ತಾಯಿಗೆ ಕಳಿಸಿದ್ದ. ಇದನ್ನು ನೋಡಿದ ಅನುಷಾ ಪಾಲಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ವಿಭಾವಾಸು ಅಶ್ಲೀಲ ವಿಡಿಯೋ ಕಳಿಸಿದ್ದಕ್ಕೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಹೈದರಾಬಾದ್​ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ