
ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಬಿಜೆಪಿ, ಕಾಂಗ್ರೆಸ್‌ನವರು ಚಕಾರ ಎತ್ತೋಕೆ ತಯಾರಿಲ್ಲದೆ ಹೋದರೂ ಈ ವಯಸ್ಸಿನಲ್ಲಿ ಗಡ್ಕರಿ ಜೊತೆಗಿನ ಅರ್ಧ ಗಂಟೆಯ ಸಭೆಗೆಂದು ದೇವೇಗೌಡರು ಬೆಂಗಳೂರಿನಿಂದ ದಿಲ್ಲಿಗೆ ಬಂದಿದ್ದರು. ಕಾವೇರಿ ತೀರ್ಪು ಬಂದರೆ ಸಿದ್ದರಾಮಯ್ಯ ಸಿಹಿ ಹಂಚುತ್ತ ಕುಳಿತರಲ್ಲರೀ.. ನನಗೆ ತಡೆಯೋಕೆ ಆಗೋಲ್ಲ. ಐ ವಿಲ್ ಫೈಟ್. ಇದಕ್ಕೇ ಪ್ರಾದೇಶಿಕ ಪಕ್ಷ ಬೇಕು ಎಂದು ಜೋರಾಗಿ ಹೇಳುತ್ತಿದ್ದರು. ನಿಮ್ ಫ್ರೆಂಡ್ ಇಬ್ರಾಹಿಂ ಯಾಕೆ ಜೆಡಿಎಸ್‌ಗೆ ಬರಲಿಲ್ಲ ಎಂದರೆ, ‘ರಾಜ್ಯ ಅಧ್ಯಕ್ಷ ಮಾಡಬೇಕಂತೆ, ರಾಜ್ಯಸಭೆಗೆ ಕಳಿಸಬೇಕಂತೆ, ಅದೆಲ್ಲ ಆಗೋಲ್ಲ ಬಿಡೋಲ್ಲ. ನೀರಿನ ಆಳ ಅಳೆಯೋಕೆ ಬಂದಿರ್ತಾರೆ ಬಿಡಿ’ ಎಂದರು. ಪ್ರಜ್ವಲ್ ಬಗ್ಗೆ ಭಾಳ ಜನ ಒಳ್ಳೇದು ಮಾತಾಡಿದ್ದಾರೆ, ನೋಡೋಣ ಎಂದು ಅಜ್ಜ ಮೊಮ್ಮಗನ ಬಗ್ಗೆ ಹೇಳೋವಾಗ ಮಾತ್ರ ಸ್ವಲ್ಪ ಆರ್ದ್ರರಾಗಿದ್ದರು
-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.