
ಕಾಂಗ್ರೆಸ್‌ನಲ್ಲಿ ಕಳೆದ 5 ತಿಂಗಳಲ್ಲಿ ರಮ್ಯಾ ದಿವ್ಯಸ್ಪಂದನ ಮಾಡುತ್ತಿರುವ ಸೋಷಿಯಲ್ ಮೀಡಿಯಾ ಕೆಲಸದಿಂದ ರಾಹುಲ್ ಗಾಂಧಿ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದ ಪತ್ರಕರ್ತರ ಎದುರು ರಾಹುಲ್, ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗಿದ್ದ ಮೇಲುಗೈಯನ್ನು ತಿರುಗಿಸಿ ಕಾಂಗ್ರೆಸ್ ದಾಳಿಗೆ ಮೊನಚು ನೀಡಿದ್ದಾರೆ ಎಂದು ತುಂಬಾ ಹೊಗಳಿದರಂತೆ. ಅಮೆರಿಕ ಪ್ರವಾಸಕ್ಕೆ ಹೋಗುವ ಮುನ್ನ ದೀಪೇಂದ
ರ್ ಹೂಡಾ ಜಾಗದಲ್ಲಿ ರಮ್ಯಾರನ್ನು ಸೋಷಿಯಲ್ ಮೀಡಿಯಾ ಮುಖ್ಯಸ್ಥರ ಹುದ್ದೆಗೆ ತಂದಿದ್ದ ರಾಹುಲ್, 30ರಿಂದ 40 ಪ್ರೊಫೆಷನಲ್ಸ್'ಗಳನ್ನು ನೇಮಿಸಿಕೊಳ್ಳುವ ಅಧಿಕಾರ ನೀಡಿದ್ದರು. ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಕುಳಿತುಕೊಂಡು ಸೋಷಿಯಲ್ ಮೀಡಿಯಾ ಜವಾಬ್ದಾರಿ ನಿರ್ವಹಿಸುವ ರಮ್ಯಾ, ದೆಹಲಿ ಮಾಧ್ಯಮಗಳಿಂದ ಮಾತ್ರ ಪೂರ್ತಿ ದೂರವೇ ಉಳಿದಿದ್ದಾರೆ. ಒಂದು ವೇಳೆ 2019ರಲ್ಲಿ ಕಾಂಗ್ರೆಸ್ ಅದೃಷ್ಟ ದೆಹಲಿಯಲ್ಲಿ ಕೈಹಿಡಿದರೆ ರಮ್ಯಾ ಗ್ರಹಗತಿಗಳು ಕೂಡ ದೆಹಲಿಯಲ್ಲಿ ಬದಲಾಗಲಿವೆ. ಕರ್ನಾಟಕದಲ್ಲಿ ಚಿತ್ರನಟಿಯಾಗಿ ಮೆರೆದರೂ ದೆಹಲಿಯಲ್ಲಿ ಮಾತ್ರ ರಮ್ಯಾ ಟ್ಯಾಕ್ಸಿಯಲ್ಲಿ ಓಡಾಡುತ್ತಾ ಸಾಮಾನ್ಯ ಕಾರ್ಯಕರ್ತೆಯಂತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ರಾಜಕಾರಣದಲ್ಲಿ ಚುನಾವಣೆಯ ಒಂದು ಸೋಲು ಏನೇನೆಲ್ಲ ಪಾಠ ಕಲಿಸುತ್ತದೆ ನೋಡಿ.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.