2019ರಲ್ಲಿ ಕನ್ನಡಿಗನಿಗೆ ಪ್ರಧಾನಿಯಾಗುವ ಕೊನೆ ಅವಕಾಶ?

Published : Jul 10, 2018, 11:46 AM ISTUpdated : Jul 10, 2018, 11:49 AM IST
2019ರಲ್ಲಿ ಕನ್ನಡಿಗನಿಗೆ ಪ್ರಧಾನಿಯಾಗುವ ಕೊನೆ ಅವಕಾಶ?

ಸಾರಾಂಶ

ಖರ್ಗೆಯವರಿಗೆ 2019ರಲ್ಲಿ ಲೋಕಸಭಾ ಚುನಾವಣೆ ನಂತರ ಪ್ರಧಾನಿಯಾಗಲು ಒಂದು ಕೊನೇ ಅವಕಾಶ   ಅತಂತ್ರ ಲೋಕಸಭೆ ಸೃಷ್ಟಿಯಾದರೆ ತೃತೀಯ ರಂಗದ ನಾಯಕರನ್ನು ಸೆಳೆಯಲು ರಾಹುಲ್ ಗಾಂಧಿ ದಲಿತ್ ಕಾರ್ಡ್ ಆಡಬಹುದು

2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶವನ್ನು ಮಲ್ಲಿಕಾರ್ಜುನ್  ಖರ್ಗೆ ಮತ್ತೊಮ್ಮೆ ತಪ್ಪಿಸಿಕೊಂಡರು.

ಆದರೆ, 2019ರಲ್ಲಿ ಲೋಕಸಭಾ ಚುನಾವಣೆ ನಂತರ ಪ್ರಧಾನಿಯಾಗಲು ಒಂದು ಕೊನೇ ಅವಕಾಶ ಸಿಕ್ಕರೂ ಸಿಗಬಹುದು, ಅದೂ ಅದೃಷ್ಟ ಇದ್ದರೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಕಚೇರಿಯಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಒಂದು ವೇಳೆ ಅತಂತ್ರ ಲೋಕಸಭೆ ಸೃಷ್ಟಿಯಾದರೆ ತೃತೀಯ ರಂಗದ ನಾಯಕರನ್ನು ಸೆಳೆಯಲು ರಾಹುಲ್ ಗಾಂಧಿ ದಲಿತ್ ಕಾರ್ಡ್ ಆಡಬಹುದು.

ಆಗ ಕಾಂಗ್ರೆಸ್ ಬಳಿ ಇರುವ ಏಕೈಕ ಹೆಸರೆಂದರೆ ಮಲ್ಲಿಕಾರ್ಜುನ್ ಖರ್ಗೆ. ಇವರ ಹೆಸರು ಮುಂದೆ ತಂದರೆ ಮಾಯಾವತಿಗೆ ವಿರೋಧ ಮಾಡಲಿಕ್ಕೆ ಕಾರಣವೇ ಇರುವುದಿಲ್ಲ. ಆದರೆ ಇದೆಲ್ಲ ಈಗ ದಿಲ್ಲಿಯ ಪೊಲಿಟಿಕಲ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಚರ್ಚೆ ಮಾತ್ರ. ಹೀಗೆಲ್ಲ ನಡೆಯಬೇಕಾದರೆ ದೇವೇಗೌಡರ ತರಹ ನಿಜಕ್ಕೂ ಅದೃಷ್ಟ ಗಟ್ಟಿಯಿರಬೇಕು ಬಿಡಿ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ರಜೆ ಮುಗಿಸಿ ವಾಪಾಸ್‌ ಬಂದ ಬಾಲಕಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್‌, ಸರ್ಕಾರಿ ಗರ್ಲ್ಸ್‌ ಹಾಸ್ಟೆಲ್‌ನ ಹೊಸ ನಿಯಮಕ್ಕೆ ಆಕ್ರೋಶ