ನಿಮ್ಮ ಹಳ್ಳಿಯನ್ನು ವ್ಯಸನ ಮುಕ್ತ ಮಾಡಿ; 5 ಲಕ್ಷ ಬಹುಮಾನ ಪಡೆಯಿರಿ

First Published Jul 10, 2018, 11:42 AM IST
Highlights

-ಮದ್ಯ ವ್ಯಸನ ಮುಕ್ತ ಹಳ್ಳಿಗೆ 5 ಲಕ್ಷ ಬಹುಮಾನ 

-ಕ್ರೀಡಾ ಪರಿಕರ ಉಚಿತ

- ಸರ್ಕಾರದ ಹೊಸ ಸ್ಕೀಂ 

ಚಂಡೀಗಢ (ಜು. 10): ಪಂಜಾಬನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಪಣತೊಟ್ಟ ಸಿಎಂ ಅಮರೀಂದರ್ ನೇತೃತ್ವದ ಸರ್ಕಾರ, ಇದೀಗ ಯುವಕ ರನ್ನು ಮಾದಕ ವ್ಯಸನಿಗಳಾಗದಂತೆ ತಡೆಯಲು ಪ್ರತೀ ಗ್ರಾಮಕ್ಕೂ 5 ಲಕ್ಷ ರು. ಅನುದಾನ ನೀಡಲು ಮುಂದಾಗಿದೆ.

ಯಾವ ಗ್ರಾಮ ಮಾದಕದ್ರವ್ಯ ಸೇವನೆ ಮುಕ್ತವಾಗುತ್ತದೆಯೋ ಆ ಗ್ರಾಮಕ್ಕೆ ತಲಾ 5  ಲಕ್ಷ ರು. ವಿಶೇಷ ಅನುದಾನ ನೀಡಲಾಗುವುದು. ಈ ಹಣದಿಂದ ಜಿಮ್ ಮತ್ತು ಕ್ರೀಡೆಗೆ ಸಂಬಂಧಿಸಿದ ಪರಿಕರಗಳನ್ನು ಖರೀದಿಸಬಹುದು ಎಂದು ಪಂಜಾಬ್‌ನ  ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ತ್ರಿಪಾಠ್ ರಾಜೀಂದರ್  ಸಿಂಗ್ ಬಜ್ವಾ ಪ್ರಕಟಿಸಿದ್ದಾರೆ. 

click me!