
ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೋದಲ್ಲಿ ಬಂದಲ್ಲೆಲ್ಲ ಜನರು ‘ಪಾಟೀಲ್ರ.. ನಿಮ್ಮ ಜಾಹೀರಾತು ಟೀವಿ ಒಳಗ ನೋಡ್ತೇವ್ರಿ, ಆದ್ರ ಸ್ವಲ್ಪ ಮೇಕಪ್ ಜಾಸ್ತಿ ಹಚ್ಚಿದ್ರಿ ನೋಡ್ರಿ’ ಎಂದು ಹೇಳುತ್ತಾರಂತೆ. ಜಾಹೀರಾತು ಶೂಟ್ ಮಾಡುವಾಗ ಪಾಟೀಲರು ‘ಅಯ್ಯೋ ನನಗೆ ಮೇಕಪ್ ಬೇಡ, ಹಾಗೇ ಇರಲಿ’ ಎಂದು ಕೇಳಿದರೂ ಬಿಡದ ಪ್ರೊಡಕ್ಷನ್ ಹೌಸ್‌ನವರು ‘ಸ್ವಲ್ಪ ಫೌಂಡೇಶನ್ ಹಚ್ಚಿದರೆ ಚೆನ್ನಾಗಿ ಕಾಣುತ್ತೆ’ ಎಂದು ಹೇಳಿ ಮೇಕಪ್ ಹಚ್ಚಿದರಂತೆ. ದೆಹಲಿಗೆ ಬಂದಾಗ ಬರೋಬ್ಬರಿ ೪ ಗಂಟೆ ಕನ್ನಡದ ಪತ್ರಕರ್ತರೊಡನೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ ಪಾಟೀಲರು ನಾನು ಜೀವನದಲ್ಲಿ ಕವಲು ದಾರಿಯಲ್ಲಿ ನಿಂತಿದ್ದೇನೆ, ಮುಂದೊಮ್ಮೆ ಮುಖ್ಯಮಂತ್ರಿಯೂ ಆಗಬಹುದು ಎಂದು ಹೇಳುತ್ತಾ ಜೋರಾಗಿ ನಗುತ್ತಿದ್ದರು. ಮಾತು ಮುಗಿಸಿ ಎದ್ದಾಗ ‘ಲಿಂಗಾಯತ ಧರ್ಮ ಉತ್ತರ ಕರ್ನಾಟಕದಲ್ಲಿ ಮೋದಿ ಹವಾ ಠುಸ್ ಮಾಡ್ತದ ನೋಡ್ರಿ’ ಎಂದ ಪಾಟೀಲರು ನಂತರ ‘ಆದ್ರ ನಾವು ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡೇವಂತ ತಿಳ್ಕೊಳುದು ಬ್ಯಾಡ್ರಿ ಮತ್ತ..’ ಎನ್ನುತ್ತಿದ್ದರು.
-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.