
‘ಮಹಾ’ದೇವಪುರ ತನ್ನ ಕ್ಷೇತ್ರಕ್ಕೆ ಮಗನನ್ನು ನಿಲ್ಲಿಸಬೇಕೆಂದಿರುವ ಸಿದ್ದರಾಮಯ್ಯ ಅವರ ಪರಮಾಪ್ತ ಎಚ್‌ಸಿ ಮಹದೇವಪ್ಪ ಬೆಂಗಳೂರಿನಲ್ಲಿ ಕ್ಷೇತ್ರ ಹುಡುಕುತ್ತಿದ್ದಾರೆ. ಮೊದಲಿಗೆ ಸ್ವಲ್ಪ ಸೇಫ್ ಆಗಿರುವ ಸಿವಿ ರಾಮನ್‌ನಗರದ ಮೇಲೆ ಕಣ್ಣು ಹಾಕಿದರು. ಅಲ್ಲಿನ ಇನ್ನೊಬ್ಬ ಸ್ಥಳೀಯ ಆಕಾಂಕ್ಷಿ ರಮೇಶ್ ದಿಲ್ಲಿಯವರೆಗೆ ಬಂದು ವೇಣುಗೋಪಾಲ್‌ಗೆ ದೂರು ಕೊಟ್ಟು ಹೋಗಿದ್ದಾರೆ. ಹೀಗಾಗಿ ಈಗ ಮಹದೇವಪ್ಪರಿಗೆ ವೇಣುಗೋಪಾಲ್ ಮಹದೇವಪುರ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಹೇಳಿದ್ದು. ಆದರೆ ಅರವಿಂದ ಲಿಂಬಾವಳಿ ವಿರುದ್ಧ ಸ್ಪರ್ಧಿಸಲು ಮಹದೇವಪ್ಪಗೆ ಮನಸ್ಸಿಲ್ಲವಂತೆ. ಇಂಟ್ರೆಸ್ಟಿಂಗ್ ಎಂದರೆ ಮಹದೇವಪ್ಪ ಅವರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ತರದಂತೆ ಡಿ ಕೆ ಶಿ,ಪರಮೇಶ್ವರ್, ವೇಣುಗೋಪಾಲ್‌ಗೆ ಹೇಳಿಯೇಬಿಟ್ಟಿದ್ದಾರೆ. ಇಷ್ಟೆಲ್ಲಾ ಹೇಳುವುದರ ಉದ್ದೇಶ ಕಾಂಗ್ರೆಸ್‌ನಲ್ಲಿ ಟಿಕೆಟ್ ಪೊಲಿಟಿಕ್ಸ್ ಜೋರಾಗಿಯೇ ಶುರುವುದಕ್ಕಾಗಿ.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದಭಾಗ )
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.