ಮನೆಗೆ ಹೋದವರಿಗೆ ಖುದ್ದು ನೀರು ದೋಸೆ, ಮೀನು ಸಾರಿ ಬಡಿಸ್ತಾರಂತೆ ಶೋಭಾ!

Published : Dec 26, 2017, 06:33 PM ISTUpdated : Apr 11, 2018, 12:57 PM IST
ಮನೆಗೆ ಹೋದವರಿಗೆ ಖುದ್ದು ನೀರು ದೋಸೆ, ಮೀನು ಸಾರಿ ಬಡಿಸ್ತಾರಂತೆ ಶೋಭಾ!

ಸಾರಾಂಶ

- ದಿಲ್ಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಇರುವ ಶೋಭಾಗಿಲ್ಲ ಕುಕ್. - ತಾವೇ ಖುದ್ದು ಕಾಫಿ ಮಾಡಿ ಕೊಡುವ ಸಂಸದೆ - ಶೋಭಾಗಿ ದಿಲ್ಲಿ ರಾಜಕೀಯವೇ ಇಷ್ಟವಂತೆ!

ಸಂಸದೆಯಾಗಿ ಕಳೆದ ಮೂರೂವರೆ ವರ್ಷಗಳಿಂದ ದೆಹಲಿಯ ನರ್ಮದಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಶೋಭಾ ಕರಂದ್ಲಾಜೆ ತನ್ನ ಮನೆಯಲ್ಲಿ ಒಬ್ಬ ಕೆಲಸದವರನ್ನೂ ಇಟ್ಟುಕೊಂಡಿಲ್ಲ!

ಯಾರಾದರೂ ಮನೆಗೆ ಹೋದರೆ ತಾನೇ ನೀರು ತಂದು ಕೊಟ್ಟು ಬಿಸಿ ಬಿಸಿ ಫಿಲ್ಟರ್ ಕಾಫಿ ಕೂಡ ಮಾಡಿಕೊಡುವ ಶೋಭಾ, ತುಮಕೂರಿನಿಂದ ತಂದ ರಾಗಿ ಬಿಸ್ಕೆಟ್ ತಿನ್ನಲು ಕೊಡುತ್ತಾರೆ. ಕ್ಷೇತ್ರದಿಂದ ಆತ್ಮೀಯ ಕಾರ್ಯಕರ್ತರು ಅಥವಾ ಹರಟೆ ಹೊಡೆಯಲು ಪತ್ರಕರ್ತರು ಬಂದರೆ, ನೀರು ದೋಸೆ, ಮೀನು ಮಾಡಿ ಬಡಿಸುವ ಶೋಭಾ ದಿನವೂ ಬೆಳಿಗ್ಗೆ ಗಂಜಿ ಊಟ ಮಾಡಿಯೇ ಪಾರ್ಲಿಮೆಂಟ್‌ಗೆ ಹೋಗುತ್ತಾರಂತೆ. 

ವಿಧಾನಸಭೆಗೆ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಕೇಳಿದರೆ ‘ಅಯ್ಯೋ ನನಗೆ ಇಷ್ಟವೇ ಇಲ್ಲ, ದಿಲ್ಲಿಯಲ್ಲಿಯೇ ಇನ್ನೊಂದು ಟರ್ಮ್ ನೋಡುತ್ತೇನೆ’ ಎಂದು ಹೇಳುವ ಶೋಭಾ 24/7 ಕರ್ನಾಟಕದ ರಾಜಕಾರಣ ಮತ್ತು ಕರಾವಳಿ ವಿಷಯ ಬಿಟ್ಟು ಬೇರೆ ಮಾತನಾಡೋದು ಕಮ್ಮಿ.


(ಕನ್ನಡ ಪ್ರಭದಲ್ಲಿ ಪ್ರಕಟವಾದ ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣ ಆಯ್ದ ಭಾಗ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನದಿ ಜೋಡಣೆ-ನೀರಾವರಿ ಚರ್ಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿಗೆ: ಎಐಸಿಸಿ ನಾಯಕರ ಭೇಟಿ ಸಾಧ್ಯತೆ
India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ