ಸುಬ್ರತಾ ರಾಯ್ ಮೇಲಿದ್ದ ಜಾಮೀನುರಹಿತ ವಾರಂಟ್ ರದ್ದು

By Suvarna Web DeskFirst Published Apr 21, 2017, 11:54 AM IST
Highlights

ಸಹಾರಾ ಕಂಪನಿ ಮುಖ್ಯಸ್ಥ ಸುಬ್ರತಾ ರಾಯ್ ಮೇಲಿರುವ ಜಾಮೀನುರಹಿತ ವಾರಂಟನ್ನು ಸೆಬಿ ನ್ಯಾಯಾಲಯ ತೆಗೆದು ಹಾಕಿದೆ. ಸುಬ್ರತಾ ರಾಯ್ ವಿಚಾರಣೆ ಇರುವ ದಿನಗಳಲ್ಲಿ ತಪ್ಪದೇ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಶರತ್ತಿನೊಂದಿಗೆ ಕೋರ್ಟ್ ವಾರಂಟನ್ನು ರದ್ದುಗೊಳಿಸಿದೆ.

ನವದೆಹಲಿ (ಏ.21): ಸಹಾರಾ ಕಂಪನಿ ಮುಖ್ಯಸ್ಥ ಸುಬ್ರತಾ ರಾಯ್ ಮೇಲಿರುವ ಜಾಮೀನುರಹಿತ ವಾರಂಟನ್ನು ಸೆಬಿ ನ್ಯಾಯಾಲಯ ತೆಗೆದು ಹಾಕಿದೆ. ಸುಬ್ರತಾ ರಾಯ್ ವಿಚಾರಣೆ ಇರುವ ದಿನಗಳಲ್ಲಿ ತಪ್ಪದೇ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಶರತ್ತಿನೊಂದಿಗೆ ಕೋರ್ಟ್ ವಾರಂಟನ್ನು ರದ್ದುಗೊಳಿಸಿದೆ.

ಹೂಡಿಕೆದಾರರಿಗೆ ನೀಡಬೇಕಾಗಿರುವ ರೂ.47 ಸಾವಿರ ಕೋಟಿ ಡಿಪಾಸಿಟ್ ನ್ನು ಸೆಬಿಗೆ ನೀಡಿ ಎಂದು ಸುಪ್ರೀಂಕೋರ್ಟ್ 2012 ರಲ್ಲಿ ಸಹಾರಾ ಕಂಪನಿಗೆ ಆದೇಶಿಸಿತ್ತು. ಹೂಡಿಕೆದಾರರ ಅಷ್ಟೂ ಹಣವನ್ನು ಮರುಪಾವತಿ ಮಾಡುವಲ್ಲಿ ವಿಫಲವಾಗಿದ್ದು ಕೇವಲ 11 ಸಾವಿರ ಕೋಟಿಯನ್ನು ಮಾತ್ರ ಪಾವತಿಸಿತ್ತು, ಹಾಗಾಗಿ ಪುಣೆಯಲ್ಲಿರುವ ಆ್ಯಂವಿ ವ್ಯಾಲಿಯನ್ನು ಹರಾಜು ಹಾಕಲು ಸುಪ್ರೀಂಕೋರ್ಟ್ ಕಳೆದ ವಾರ ಆದೇಶಿಸಿತ್ತು.

ಮೇ. 18 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ಹೇಳಿದೆ.

click me!