ಎಲ್ಲ ರಾಜ್ಯದಲ್ಲಿರುವ ಕಾಶ್ಮೀರಿಗಳ ಬಗ್ಗೆ ಸುರಕ್ಷತೆ ವಹಿಸಿ

By Suvarna Web DeskFirst Published Apr 21, 2017, 11:27 AM IST
Highlights

ಕಾಶ್ಮೀರಿಗಳ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿರುವ ಗೃಹ ಸಚಿವರು, ಅವರನ್ನು ಅನ್ಯರಂತೆ ಕಾಣದೆ ನಮ್ಮ ರಾಷ್ಟ್ರದ ಪ್ರಜೆಗಳಂತೆ ಪ್ರೀತಿಸಿ ಹೆಚ್ಚಿನ ತೊಂದರೆಯಾಗದಂತೆ ಎಚ್ಚರವಹಿಸಿ.ದೇಶದ ಕೆಲವು ಕಡೆ ಕಾಶ್ಮೀರಿಗಳ ವಿರುದ್ಧ ಅಹಿತಕರ ಘಟನೆಗಳು ನಡೆಯುತ್ತಿವೆ

ಬೆಂಗಳೂರು(ಏ.21): ದೇಶದ ವಿವಿಧ ಭಾಗದಲ್ಲಿ ನೆಲಸಿರುವ ಕಾಶ್ಮೀರಿಗಳ ಬಗ್ಗೆ ಸುರಕ್ಷತೆ ವಹಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ.

ಕಾಶ್ಮೀರಿಗಳ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿರುವ ಗೃಹ ಸಚಿವರು, ಅವರನ್ನು ಅನ್ಯರಂತೆ ಕಾಣದೆ ನಮ್ಮ ರಾಷ್ಟ್ರದ ಪ್ರಜೆಗಳಂತೆ ಪ್ರೀತಿಸಿ ಹೆಚ್ಚಿನ ತೊಂದರೆಯಾಗದಂತೆ ಎಚ್ಚರವಹಿಸಿ.ದೇಶದ ಕೆಲವು ಕಡೆ ಕಾಶ್ಮೀರಿಗಳ ವಿರುದ್ಧ ಅಹಿತಕರ ಘಟನೆಗಳು ನಡೆಯುತ್ತಿವೆ. ಅವರ ಬಗ್ಗೆ ನಿಗಾ ವಹಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ'ಎಂದು ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೆಲವು ದಿನಗಳ ಹಿಂದೆ ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕಾಶ್ಮೀರಿಗಳ ವಿರುದ್ಧ ಬೆದರಿಕೆ, ಕಲ್ಲು ಎಸೆತ ಪ್ರಕರಣಗಳು ನಡೆದಿದ್ದವು. ಅಲ್ಲದೆ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಸಿಬ್ಬಂದಿ ಅಲ್ಲಿನ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ವರದಿಯಾಗಿದ್ದವು.

click me!