NDTV ಮುಖ್ಯಸ್ಥ ಪ್ರಣಯ್‌ ರಾಯ್‌ಗೆ ಸೆಬಿ 2 ವರ್ಷ ನಿಷೇಧ!

Published : Jun 15, 2019, 08:22 AM IST
NDTV ಮುಖ್ಯಸ್ಥ ಪ್ರಣಯ್‌ ರಾಯ್‌ಗೆ ಸೆಬಿ 2 ವರ್ಷ ನಿಷೇಧ!

ಸಾರಾಂಶ

NDTV ಮುಖ್ಯಸ್ಥ ಪ್ರಣಯ್‌ ರಾಯ್‌ಗೆ ಸೆಬಿ 2 ವರ್ಷ ನಿಷೇಧ| ಎರಡು ವರ್ಷಗಳ ಕಾಲ ಷೇರುಪೇಟೆ ಪ್ರವೇಶವಿಲ್ಲ

ನವದೆಹಲಿ[ಜೂ.15]: ಎನ್‌ಡಿಟೀವಿಯ ಮುಖ್ಯ ಪ್ರವರ್ತಕರಾದ ಪ್ರಣಯ್‌ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ರಾಯ್‌ ಎರಡು ವರ್ಷಗಳ ಕಾಲ ಷೇರುಪೇಟೆ ಪ್ರವೇಶ ಮಾಡದಂತೆ ಸೆಬಿ[ಭಾರತದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್] ನಿಷೇಧ ಹೇರಿದೆ.

ಅಲ್ಲದೆ ಈ ಇಬ್ಬರೂ ಕಂಪನಿಯಲ್ಲಿ ಆಡಳಿತ ಮಂಡಳಿ ಸೇರಿದಂತೆ ಯಾವುದೇ ಹುದ್ದೆಯನ್ನು ವಹಿಸಿಕೊಳ್ಳುವಂತಿಲ್ಲ ಎಂದೂ ಸೂಚಿಸಿದೆ. ಅಲ್ಲದೆ ಇತರೆ ಯಾವುದೇ ಕಂಪನಗಳ ಆಡಳಿತ ಮಂಡಳಿಯನ್ನೂ ಒಂದು ವರ್ಷಗಳ ಕಾಲ ಸೇರದಂತೆ ನಿಷೇಧಿಸಿದೆ.

ಕಂಪನಿಯ ಮೂರು ಸಾಲ ಒಪ್ಪಂದ ಸಂಬಂಧ, ಸಣ್ಣ ಷೇರುದಾರರನ್ನು ಕತ್ತಲಿಲ್ಲ ಇಟ್ಟಿದ್ದ ಹಿನ್ನೆಲೆಯಲ್ಲಿ ಸೆಬಿ ಈ ಶಿಸ್ತು ಕ್ರಮ ಕೈಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್