ಈರುಳ್ಳಿಯ ಕಣ್ಣೀರು ರಹಸ್ಯ ಬಯಲು! ಈರುಳ್ಳಿಯಿಂದ ಆತ್ಮರಕ್ಷಣೆಗಾಗಿ ಎಲ್ಎಫ್ ಬಿಡುಗಡೆ

By Suvarna Web DeskFirst Published Aug 5, 2017, 12:33 AM IST
Highlights

ಕೆಲವೊಂದು ಕಿಣ್ವಗಳಿಂದಾಗಿ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆ ಎಂಬುದು ಈ ಹಿಂದೆಯೇ ಗೊತ್ತಿತ್ತು. ಆದರೆ ಈರುಳ್ಳಿಯಲ್ಲಿ ಎಲ್‌ಎಫ್ ರಚನೆ ಹೇಗಾಗುತ್ತದೆ ಎಂಬುದು ಪ್ರಶ್ನೆಯಾಗಿತ್ತು.

ವಾಷಿಂಗ್ಟನ್(ಆ.05): ಈರುಳ್ಳಿ ಅಡುಗೆಯ ರುಚಿ ಹೆಚ್ಚಿಸುತ್ತದೆ. ಜೊತೆಗೆ ಮನೆಯಲ್ಲಿ ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಅಡುಗೆ ಮನೆಯಲ್ಲಿ ಹೆಂಗಸರ ಪಾಲಿಗೆ ಅತ್ಯಂತ ಕಷ್ಟಕರ ಸಂಗತಿ ಎಂದರೆ ಈರುಳ್ಳಿ ಹೆಚ್ಚೋದು ಅನ್ನೋದು ಕೂಡಾ ಅಷ್ಟೇ ಸತ್ಯ. ಅಷ್ಟಕ್ಕೂ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರೋದು ಏಕೆ?

ವಿಜ್ಞಾನಿಗಳ ಪ್ರಕಾರ ತನ್ನ ಆತ್ಮರಕ್ಷಣೆಗಾಗಿ ಈರುಳ್ಳಿ ನಡೆಸುವ ಹೋರಾಟದಿಂದಾಗಿ, ಅದನ್ನು ಹೆಚ್ಚುವವರ ಕಣ್ಣಲ್ಲಿ ನೀರು ಬರುತ್ತದೆಯಂತೆ! ಯಾರಾದರೂ ಈರುಳ್ಳಿಯನ್ನು ಹೆಚ್ಚುವಾಗ ಅದು ಲ್ಯಾಚ್ರಿಮೇಠರಿ ಫ್ಯಾಕ್ಟರ್ (ಎಲ್‌ಎಫ್) ಎಂಬ ಸಂಯುಕ್ತವೊಂದನ್ನು ಬಿಡುಗಡೆ ಮಾಡುತ್ತದೆ. ಇದೇ ಕಣ್ಣೀರು ಬರಲು ಕಾರಣ ಎಂದು ವಿಜ್ಙಾನಿಗಳು ಹೇಳಿದ್ದಾರೆ.

Latest Videos

ಹೌದು, ಕೆಲವೊಂದು ಕಿಣ್ವಗಳಿಂದಾಗಿ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆ ಎಂಬುದು ಈ ಹಿಂದೆಯೇ ಗೊತ್ತಿತ್ತು. ಆದರೆ ಈರುಳ್ಳಿಯಲ್ಲಿ ಎಲ್‌ಎಫ್ ರಚನೆ ಹೇಗಾಗುತ್ತದೆ ಎಂಬುದು ಪ್ರಶ್ನೆಯಾಗಿತ್ತು. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ ಬಳಿಕ, ಇದೊಂದು ನೈಸರ್ಗಿಕ ಆತ್ಮ ರಕ್ಷಣಾ ವ್ಯವಸ್ಥೆಯಾಗಿದ್ದು, ಈರುಳ್ಳಿ ಕತ್ತರಿಸಿದಾಗ ಅದು ಸಕ್ರಿಯಗೊಂಡು ಎಲ್‌ಎಫ್ ಉತ್ಪತ್ತಿಯಾಗುತ್ತದೆ. ಅದು ಹೆಚ್ಚುವವರ ಕಣ್ಣಲ್ಲಿ ನೀರು ತರಿಸುತ್ತದೆ ಎಂಬ ಉತ್ತರ ವಿಜ್ಞಾನಿಗಳಿಗೆ ಲಭ್ಯವಾಗಿದೆ.

ಓರ್ವ ಭಾರತೀಯ ವಿಜ್ಞಾನಿಯೂ ಸೇರಿದಂತೆ, ಅಮೆರಿಕದ ವಿಜ್ಞಾನಿಗಳ ತಂಡವೊಂದು ಸಂಶೋಧನೆಯ ಮೂಲಕ ಮೇಲ್ಕಂಡ ಉತ್ತರವನ್ನು ಕಂಡುಕೊಂಡಿದೆ.

click me!