ನೀಲಿ ಚಿತ್ರ ತೋರಿಸುವ ಕಳ್ಳ ಗುರುವಿಗೆ ಚಾಂಡಾಲ ಶಿಷ್ಯನ ಸಾಥ್

Published : Sep 16, 2018, 04:53 PM ISTUpdated : Sep 19, 2018, 09:27 AM IST
ನೀಲಿ ಚಿತ್ರ ತೋರಿಸುವ ಕಳ್ಳ ಗುರುವಿಗೆ ಚಾಂಡಾಲ ಶಿಷ್ಯನ ಸಾಥ್

ಸಾರಾಂಶ

ಇವ ಅಂತಿಂಥ ಪ್ರಾಚಾರ್ಯ ಅಲ್ಲ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗೆ ನೀಲಿ ಚಿತ್ರ ತೋರಿಸುತ್ತಿದ್ದ ಕಳ್ಳ ಗುರು.   ಕಳ್ಳ ಗುರುವಿಗೆ ಕೌನ್ಸಿಲರ್ ಎಂಬ ಚಾಂಡಾಲ ಶಿಷ್ಯನ ಸಾಥ್.

ಪುಣೆ[ಸೆ.16] 14 ವರ್ಷದ ವಿದ್ಯಾರ್ಥಿಗೆ ನೀಲಿಚಿತ್ರ ತೋರಿಸಿದ ಆರೋಪದ ಮೇಲೆ ಅನುದಾನಿತ ಇಂಗ್ಲೀಷ್ ಮಾಧ್ಯಮ ಶಾಲೆಯ ಪ್ರಾಚಾರ್ಯರೊಬ್ಬರ ಮೇಲೆ ದೂರು ದಾಖಲಾಗಿದೆ.

ಕಳೆದ ಮಾರ್ಚ್‌ನಲ್ಲಿಯೇ ನಡೆದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಸಿಬ್ಬಂದಿ ಕೊಠಡಿ ಮತ್ತು ಪ್ರಿನ್ಸಿಪಾಲ್ ಚೇಂಬರ್‌ಗೆ ಬಾಲಕನನ್ನು ಕರೆದೊಯ್ದ ಪ್ರಿನ್ಸಿಪಾಲ್, ಬಾಲಕನಿಗೆ ನೀಲಿಚಿತ್ರ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪದ  ಮೇಲೆ ದೂರು ದಾಖಲಾಗಿದೆ.

ಹೊರಗೆ ಬಾಯಿ ಬಿಡದಂತೆ ಬಾಲಕನಿಗೆ ಶಾಲಾ ಆಡಳಿತ ಬೆದರಿಕೆ ಹಾಕಿತ್ತು.  ಇದಾದ ಮೇಲೆ ಶಾಲೆಗೆ ತೆರಳಲು ಬಾಲಕ ನಿರಾಕರಿಸುತ್ತಿದ್ದ. ಪೋಷಕರು ಪ್ರಶ್ನೆ ಮಾಡಿದಾಗ ಬಾಲಕ ನಡೆದ ಸಂಗತಿ ತಿಳಿಸಿದ್ದಾನೆ.

ಅದು ಹೇಗೋ ಮಾಹಿತಿ ಪಡೆದುಕೊಂಡಿರುವ ಪ್ರಾಚಾರ್ಯ ಕಳೆದ ಎರಡು ವಾರದಿಂದ ಶಾಲೆಗೆ ಬಂದಿಲ್ಲ. ತಲೆ ಮರೆಸಿಕೊಂಡಿರುವ ವಿಕೃತನ ಬಂಧನಕ್ಕೆ ಬಲೆ ಬೀಸಲಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!