ಕುಂದಾನಗರಿಯಲ್ಲಿ ಹನಿ ನೀರಾವರಿ ಯೋಜನೆಯಲ್ಲಿ ಭಾರೀ ಅಕ್ರಮ: ಡೀಲರ್'ಗಳ ಜೇಬು ಸೇರಿದೆ ಮೂರು ಕೋಟಿ

Published : Jun 06, 2017, 08:11 AM ISTUpdated : Apr 11, 2018, 01:11 PM IST
ಕುಂದಾನಗರಿಯಲ್ಲಿ ಹನಿ ನೀರಾವರಿ ಯೋಜನೆಯಲ್ಲಿ ಭಾರೀ ಅಕ್ರಮ: ಡೀಲರ್'ಗಳ ಜೇಬು ಸೇರಿದೆ ಮೂರು ಕೋಟಿ

ಸಾರಾಂಶ

ಸಿಎಂ ಸಿದ್ಧರಾಮಯ್ಯ ಅವರ ಕನಸಿನ ಕೂಸು ಕೃಷಿ ಭಾಗ್ಯ ಯೋಜನೆ. ಆದಿದ್ದರೂ ರೈತರ ಪಾಲಿಗೆ ದೌರ್ಭಾಗ್ಯವಾಗಿದೆ. ಭ್ರಷ್ಟ ಅಧಿಕಾರಗಳ ಪಾಲಿಗೆ ಜೇಬು ತುಂಬಿಸುವ ಯೋಜನೆ ಎನ್ನುವುದನ್ನು  ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಸಾಕ್ಷಿ ಸಮೇತ ಬಿಚ್ಚಿಟ್ಟಿದೆ.. ಇಷ್ಟಾಗಿದ್ದೇ ತಡ ಕೃಷಿ ಭಾಗ್ಯದಲ್ಲಿನ ಇನ್ನಷ್ಟು ಹಗರಣಗಳು ಬಿಚ್ಚಿಕೊಳ್ಳುತ್ತಿವೆ.

ಬೆಳಗಾವಿ(ಜೂ.06): ಸಿಎಂ ಸಿದ್ಧರಾಮಯ್ಯ ಅವರ ಕನಸಿನ ಕೂಸು ಕೃಷಿ ಭಾಗ್ಯ ಯೋಜನೆ. ಆದಿದ್ದರೂ ರೈತರ ಪಾಲಿಗೆ ದೌರ್ಭಾಗ್ಯವಾಗಿದೆ. ಭ್ರಷ್ಟ ಅಧಿಕಾರಗಳ ಪಾಲಿಗೆ ಜೇಬು ತುಂಬಿಸುವ ಯೋಜನೆ ಎನ್ನುವುದನ್ನು  ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಸಾಕ್ಷಿ ಸಮೇತ ಬಿಚ್ಚಿಟ್ಟಿದೆ.. ಇಷ್ಟಾಗಿದ್ದೇ ತಡ ಕೃಷಿ ಭಾಗ್ಯದಲ್ಲಿನ ಇನ್ನಷ್ಟು ಹಗರಣಗಳು ಬಿಚ್ಚಿಕೊಳ್ಳುತ್ತಿವೆ.

ನಿಜಕ್ಕೂ ಬೆಚ್ಚಿ ಬೀಳಿಸುವ ಸಂಗತಿ ಇದು. ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ  90 % ಸಬ್ಸಿಡಿ  ಹನಿ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಡೀಲರ್​'ಗಳ ಭಾಗ್ಯದ ಯೋಜನೆಯಾಗಿದೆ. ಡ್ರಿಪ್ ಮಾಡಿಕೊಡುವ ಪೈಪ್​ಲೈನ್ ಡಿಲರ್​ಗಳು ರೈತರಿಗೆ.. ಅಧಿಕಾರಿಗಳಿಗೆ ಭಾರೀ ನಾಮ ಹಾಕಿದ್ದಾರೆ. ರೈತನಿಗೆ ಮಂಜೂರಾದ 5 ಎಕರೆ ಜಮೀನಿಗೆ ಪೈಪ್​ಲೈನ್ ಹಾಕಿಕೊಡುವುದು ಬಿಟ್ಟು. ಕೇವಲ 2.5 ಎಕ್ಕರೆ ಜಮೀನಿಗೆ ಡ್ರಿಪ್ ಮಾಡಿ  ಸರ್ಕಾರ  ಮತ್ತು ರೈತರಿಗೆ ಮೋಸ ಮಾಡಿ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾರೆ.

ಹುಕ್ಕೇರಿ ತಾಲೂಕಿನಲ್ಲಿ 2015-16ನೇ ಸಾಲಿನಲ್ಲಿ 440 ಜನ ರೈತರಿಗೆ ಹನಿ ನೀರಾವರಿ ಯೋಜನೆ ಜಾರಿಯಾಗಿದೆ. ಇದ್ರಲ್ಲಿ ಶೇಕಡಾ 60 ರಷ್ಟು  ರೈತರಿಗೆ ನಾಮಹಾಕಿದ್ದಾರೆ. ಇನ್ನೂ ಪ್ರತಿ ರೈತರಿಂದ 118393 ರೂಪಾಯಿ ಜೇಬಿಗಿಳಿಸಿಕೊಂಡ ಡೀಲರ್ಸ್​ ಒಟ್ಟು 2,84,14,320 ಕೋಟಿ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ. ಸುವರ್ಣ ನ್ಯೂಸ್ ಹುಕ್ಕೇರಿ ತಾಲೂಕಿನ ಪ್ರತಿ ರೈತನ ಗದ್ದೆಗೆ ಭೇಟಿ ನೀಡಿ  ಕೇಸ್ ಸ್ಟಡಿ ಮಾಡಿ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟಿದೆ.

ಇನ್ನೂ ಐ.ಎಸ್.ಐ ಮಾರ್ಕ್​ ಇರುವ ಪೈಪ್ ಹಾಕಿಲ್ಲ. ಸರ್ಕಾರ ಮೂರು ಮತ್ತು ನಾಲ್ಕು ಪೂಟ್ ಗೊಂದರಂತೆ ಡ್ರಿಪ್ ಪೈಪ್ ಅಳವಡಿಸಬೇಕು ಎಂದು ಹೇಳಿದ್ದರು. ಇಲ್ಲಿ 7 ರಿಂದ 8 ಫೀಟ್​ಗೆ ಒಂದರಂತೆ ಡ್ರಿಪ್ ಪೈಪ್ ಹಾಕಿದ್ದಾರೆ. ಯೋಜನೆಯ ಇಂಚಿಂಚಿನಲ್ಲೂ ರೈತರಿಗೆ ಡೀಲ್​'ರಗಳು ನಾಮ ಹಾಕಿದ್ದಾರೆ.

ಮಾನ್ಯ ಕೃಷಿ ಸಚಿವರೇ.. ಅನ್ನದಾತನ ಪಾಲಿಗೆ ವರವಾಗಬೇಕಿದ್ದ ಯೋಜನೆ ಸಂಪೂರ್ನ ಹಳ್ಳ ಹಿಡಿದಿದೆ. ಸುವರ್ಣ ನ್ಯೂಸ್ ಸಾಕ್ಷಿ ಸಮೇತ ಹಗರಣ ಬಿಚ್ಚಿಟ್ಟಿದೆ. ಸಚಿವರೇ ಅಮಾಯಕ ರೈತನಿಗೆ ನಾಮಹಾಕಿದ ಡೀಲರ್​ಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ನಿಮ್ಮಮೇಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌